ನವಜಾತ ಶಿಶುಗಳಿಗೆ ತಾಯಿ ಎದೆಹಾಲು ಉತ್ತಮ ಆರೋಗ್ಯಕರ 

ಹರಿಹರ ಏ 21:   ಗರ್ಭಿಣಿಯರಿಗೆ ಸಮತೋಲ ಆಹಾರದ ಅವಶ್ಯಕತೆ ತುಂಬಾ ಇದೆ. ಗರ್ಭಿಣಿಯರು ಸಕಾಲಕ್ಕೆ ಬೇಕಾದಷ್ಟು ಪೌಷ್ಟಿಕ ಆಹಾರ ಸೇವಿಸದೇ ಅಲ್ಪ ಆಹಾರ ಸೇವಿಸುವುದರಿಂದ ಹುಟ್ಟುವ ಮಗು ಗಾತ್ರದಲ್ಲಿ ಚಿಕ್ಕದಿದ್ದು, ಹೆರಿಗೆ ಸುಲಭವಾಗುವುದೆಂಬ ಅಪನಂಬಿಕೆ ಗ್ರಾಮೀಣ ಮಹಿಳೆಯರಲ್ಲಿ ಬೇರೂರಿದೆ. ಇದು ತಪ್ಪು ಕಲ್ಪನೆ. ಪ್ರತಿ ತಾಯಿಯು ತಮಗೆ ಹುಟ್ಟುವ ಮಗುವು ಮುದ್ದಾಗಿದ್ದು ಆರೋಗ್ಯದಿಂದಿರಬೇಕೆಂಬ ಕನಸು ಕಾಣುತ್ತಾಳೆ. ಈ ಕನಸು ನನಸಾಗಬೇಕಾದರೆ, ಅವಳು ದಿನವೂ ಸಮತೋಲನ ಆಹಾರ ಸೇವಿಸಬೇಕು. ಎಂದು ಸಾರ್ವಜನಿಕ ಆಸ್ಪತ್ರೆಯ ನರ್ಸಿಂಗ್ ಆಫೀಸರ್ ಲಲಿತಮ್ಮ ಹೇಳಿದರುಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗು ಆರೋಗ್ಯ ಕಾರ್ಯಕ್ರಮದಲ್ಲಿ ಮಾತನಾಡಿದವರು ಒಂದು ವೇಳೆ ಈ ರೀತಿ ಮಾಡದಿದ್ದಲ್ಲಿ ಗರ್ಭದಲ್ಲಿ ಬೆಳೆಯುತ್ತಿರುವ ಮಗು ತನಗೆ ಬೇಕಾಗುವ ಪೋಷಕಾಂಶಗಳನ್ನು ತನ್ನ ತಾಯಿಯ ದೇಹದಿಂದ ಪಡೆದುಕೊಳ್ಳುವುದರಿಂದ ಅವಳು ಹಲವಾರು ವೈದ್ಯಕೀಯ ಸಮಸ್ಯೆಗಳಿಗೆ ಗುರಿಯಾಗಬೇಕಾಗುವುದು. ಆದುದರಿಂದ, ತಾಯಿಯು ಹೆಚ್ಚು ಆಹಾರ ಸೇವಿಸುವುದರ ಜೊತೆಗೆ ಅದು ವಿವಿಧ ತರಹದ ಆಹಾರವಾಗಿರಬೇಕು.ಗರ್ಭಿಣಿ ತೆಗೆದುಕೊಳ್ಳುವ ಆಹಾರದಲ್ಲಿ ದ್ವಿದಳ ಧಾನ್ಯ ಹಾಗೂ ಅವುಗಳ ಉತ್ಪನ್ನಗಳು, ಎಲ್ಲಾ ಋತುಗಳ ತರಕಾರಿಗಳು, ಹಣ್ಣು ಹಂಪಲುಗಳು ಮತ್ತು ಸೊಪ್ಪಿನ ತರಕಾರಿಗಳು ಸೇರಿರಬೇಕು. ನವಜಾತ ಶಿಶುವಿಗೆ ತಾಯಿಯ ಎದೆಹಾಲು ಪೋಷಣೆಯ ಮೂಲ ಎಂದು ಹೇಳಲಾಗುತ್ತದೆ. ಮಗು ಹುಟ್ಟಿ ಆರು ತಿಂಗಳವರೆಗೆ ತಾಯಿಯ ಎದೆಹಾಲು ಮಾತ್ರ ನೀಡಬೇಕು. ಅದು ಜೀವನಪರ್ಯಂತ ಮನುಷ್ಯ ಆರೋಗ್ಯವಾಗಿರಲು ನೆರವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳುತ್ತದೆ. ಮಗುವಿಗೆ 6 ತಿಂಗಳ ನಂತರ ಎದೆಹಾಲು ಜೊತೆಗೆ ಪೂರಕ ಆಹಾರ ನೀಡಿ ಎದೆಹಾಲನ್ನು ಮಗುವಿಗೆ 2 ವರ್ಷ ಕಳೆಯುವವರೆಗೂ ನೀಡಬಹುದು ಎಂದರುನರ್ಸಿಂಗ್ ಆಫೀಸರ್   ಶ್ವೇತಾ ಮಾತನಾಡಿ ಕೇವಲ ಸ್ತನಪಾನ” ಎಂದರೆ ಶಿಶು 6 ತಿಂಗಳು ಆಗುವವರೆಗೂ ಯಾವುದೇ ರೀತಿಯ ಆಹಾರ, ಪಾನೀಯಗಳು ಕೊಡದೆ ಕೇವಲ ತಾಯಿಯ ಎದೆ ಹಾಲು ಕುಡಿಸಬೇಕು ಮತ್ತು ಅದು ಬಿಟ್ಟರೆ ಓ ಆರ್ ಎಸ್, ಅಥವಾ ಔಷಧಿಗಳನ್ನು ಕೊಡಬಹುದು. ಮಗು ಜನಿಸಿದ ಮೊದಲ ಅರ್ಧ ಗಂಟೆಯಲ್ಲೇ ತಾಯಿಯ ಎದೆ ಹಾಲನ್ನು ಕೊಡಬೇಕು ಮತ್ತು ಮಗುವಿಗೆ ಬೇಕಾದಷ್ಟು ಹಾಲನ್ನು ಕೊಡಬೇಕು. ಮಗು ಬೆಳೆಯುತ್ತಾ ಹೋದಂತೆ ಎದೆ ಹಾಲು ಕುಡಿಯುವ ಸಮಯವೂ ಕಡಿಮೆಯಾಗುತ್ತದೆ. ಫಾರ್ಮುಲಾ ಹಾಲು ಕೊಡುವುದಕ್ಕಿಂತ, ಸ್ತನಪಾನವು ತಾಯಿ ಮತ್ತು ಮಗು, ಇಬ್ಬರ ಆರೋಗ್ಯಕ್ಕೂ ಒಳ್ಳೆಯ ಬೆಳವಣಿಗೆ ಎಂದರು ಆಸ್ಪತ್ರೆಯ ಸಿಬ್ಬಂದಿಗಳಾದ ತೇಜಸ್ವಿನಿ ಪಿ. ದುರುಗೇಶ್. ಲಕ್ಷ್ಮಿ. ಸೌಮ್ಯ. ಆಸ್ಪತ್ರೆಯ ಸಿಬ್ಬಂದಿ ವರ್ಗ ತಾಯಂದರು  ಪ್ರತಿ ತಾಯಿ ಮಗು ವಿಶಿಷ್ಟತೆ ಕಾರ್ಯಕ್ರಮದಲ್ಲಿ ಇದ್ದರು