ನವಂಬರ್ ನಲ್ಲಿ ದಾಖಲೆಯ 1.31 ಲಕ್ಷ ಕೋಟಿ ಜಿಎಸ್ ಟಿ ಸಂಗ್ರಹ

ನವದೆಹಲಿ,ಡಿ.1- ನವಂಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ – ಜಿಎಸ್ ಟಿ ದಾಖಲೆಯ ಪ್ರಮಾಣದಲ್ಲಿ ಸಂಗ್ರಹವಾಗಿದೆ.

ಒಟ್ಟಾರೆ ಜಿಎಸ್ ಟಿ ತೆರಿಗೆ ಸಂಗ್ರಹ ಪ್ರಮಾಣ 1,31,526 ಲಕ್ಷ ಕೋಟಿ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಕಳೆದ ವರ್ಷ ನವಂಬರ್ ತಿಂಗಳ ಇದೇ ಅವಧಿಯಲ್ಲಿ ಶೇಕಡಾ 25ರಷ್ಟು ಮತ್ತು 2009ರಲ್ಲಿ ಶೇಕಡ 20ರಷ್ಟು ಹೆಚ್ಚು ಸಂಗ್ರಹವಾಗಿದೆ.

ಈ ವರ್ಷ ನವಂಬರ್ ತಿಂಗಳಲ್ಲಿ ಸಂಗ್ರಹವಾಗಿರುವ ಒಟ್ಟು ಜಿಎಸ್ ಟಿ ಪೈಕಿ 23,978 ಕೋಟಿ ಸಿಜಿಎಸ್ ಟಿ, 31,127 ಕೋಟಿ ಎಸ್ ಜಿ ಎಸ್ ಟಿ, 66,185 ಕೋಟಿ ರೂಪಾಯಿ ಐಜಿಎಸ್ ಟಿ ಸಂಗ್ರಹವಾಗಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ.

ಇದೇ ಅವಧಿಯಲ್ಲಿ ಕೇಂದ್ರ ಸರ್ಕಾರ 27, 273 ಕೋಟಿ ರೂಪಾಯಿ ಸಿಜಿಎಸ್ ಟಿ ಮತ್ತು 22,655 ಕೋಟಿ ರೂಪಾಯಿ ಎಸ್ ಜಿ ಎಸ್ ಟಿ ಮತವನ್ನು ರಾಜ್ಯಗಳಿಗೆ ನೀಡಲಾಗಿದೆ ಎಂದು ತಿಳಿಸಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 53,782 ಕೋಟಿ ರೂಪಾಯಿ ಸರಕು ಮತ್ತು ಸೇವಾ ತೆರಿಗೆ ಪರಿಹಾರ ಪಾವತಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಇತ್ತೀಚಿನ ಕೆಲವು ತಿಂಗಳಿನಿಂದ ಈಚೆಗೆ ಸರಕು ಮತ್ತು ಸೇವಾ ತೆರಿಗೆ ತಿಂಗಳಿಂದ ತಿಂಗಳಿಗೆ ಹೆಚ್ಚಾಗುತ್ತಿದೆ. ಇದು ಆಶಾದಾಯಕ ಬೆಳವಣಿಗೆ ಎಂದು ಸಚಿವಾಲಯ ಮಾಹಿತಿ ನೀಡಿದೆ.