ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಬಂಜಾರ ಸಮಾಜ ಖಂಡನೆ

ಗುರುಮಠಕಲ್ ;ಅ.31: ರಾಜ್ಯದ ಉಪಚುನಾವಣೆಯಲ್ಲಿ ಶಿರಾದಲ್ಲಿ ನಡೆದ ಮಾದಿಗ ಸಮುದಾಯದ ಮೆರವಣಿಗೆಯಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷರು ಹಾಗು ಸಂಸದರಾದ ನಳೀನ್ ಕುಮಾರ್ ಕಟೀಲ್ ಅವರು ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿಗೆ ಬದ್ಧ ಎಂದು ಹೇಳಿಕೆ ನೀಡಿರುವುದನ್ನು ಬಂಜಾರ, ಬೋವಿ, ಕೊರಚ, ಕೊರಮ ಸಮುದಾಯಗಳು ಉಗ್ರವಾಗಿ ಖಂಡಿಸಬೇಕಾಗಿದೆ.

ಪಟ್ಟಣದ ಬಂಜಾರ ಕಚೇರಿಯಲ್ಲಿ ನಳೀನ್ ಕುಮಾರ್ ಕಟೀಲ್ ಅವರ ಹೇಳಿಕೆಯನ್ನು ವಿರೋಧಿಸಿ ಪತ್ರಿಕಾಗೋಷ್ಠಿಯಲ್ಲಿ ಬಂಜಾರ ತಾಲ್ಲೂಕು ಅಧ್ಯಕ್ಷ ಕಾಶಿನಾಥ ರಾಠೋಡ ಅವರು ಮಾತನಾಡಿದರು,

ಶಿರಾದಲ್ಲಿ ಮಾದಿಗ ಸಮುದಾಯದ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಸದಾಶಿವ ಆಯೋಗದ ವರದಿಯನ್ನು ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಲು ಮುಂದಾಗಿರುವ ನಳೀನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಂಜಾರ ಮುಖಂಡ ಸುರೇಶ್ ಚಿನ್ನರಾಠೋಡ, ಮೋಹನ್ ರಾಠೋಡ, ಶರಣಪ್ಪ, ಗೋಪಾಲ ರಾಠೋಡ, ಜಮುಲನಾಯಕ, ಗೋಪಿ, ರಾಜು, ಡಿ.ಕೆ ರವಿ ಇತರರು ಭಾಗವಹಿಸಿದರು.