ನಲ್ಲಿಕಾಯಿ ಉಪಯೋಗಗಳು

ಆರೋಗ್ಯ ನಮ್ಮನ್ನು ಬಾಧಿಸುವ ಕೆಲವು ರೋಗಗಳಿಗೆ ನೆಲ್ಲಿಕಾಯಿ ರಾಮಬಾಣವಾಗಿದೆ. ಹಿಂದಿನ ಕಾಲದಲ್ಲಿ ಅದರ ಮಹತ್ವ ಅರಿತುಕೊಂಡ ಹಿರಿಯರು ಕಾಡಿನಲ್ಲಿ ಹೇರಳವಾಗಿ ಸಿಕ್ಕುವ ನೆಲ್ಲಿಕಾಯಿಯನ್ನು ತಂದು ವಿವಿಧ ರೀತಿಯಲ್ಲಿ ಬಳಸುತ್ತಿದ್ದರು. ಇವತ್ತು ಕಾಡು ನಾಶವಾದ ಕಾರಣ ಬೆಟ್ಟದ ನೆಲ್ಲಿಕಾಯಿ ನಾಶವಾಗುತ್ತಿದೆಯಾದರೂ ಸುಧಾರಿತ ತಳಿಗಳು ಸಿಗುತ್ತಿವೆ. ಅವುಗಳನ್ನು ಬೆಳೆಸಿ ಲಾಭ ಪಡೆಯಬಹುದಾಗಿದೆ. ನೆಲ್ಲಿಕಾಯಿಯಲ್ಲಿ ಹೇರಳವಾಗಿ ಸಿ ವಿಟಮಿನ್ ಇದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಪಿತ್ತವನ್ನೂ ನಿಯಂತ್ರಿಸುತ್ತದೆ.
ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದರೆ, ಮಲಬದ್ಧತೆ, ಅಲ್ಸರ್, ಕರುಳಿನ ತೊಂದರೆಗೆ ರಾಮಬಾಣವಾಗಿದೆ. ಜೊತೆಗೆ ಕೂದಲಿನ ಬೆಳವಣಿಗೆಗೆ ಸಹಕರಿಯಾಗಿದ್ದು, ದೃಷ್ಟಿ ವರ್ಧಿಸುವ ಗುಣ ಹೊಂದಿದೆ.
ನೆಲ್ಲಿಕಾಯಿಯ ಆಮ್ಲ ಜ್ಯೂಸ್ ರಸವನ್ನು ದಿನವೂ ಆಹಾರ ಕ್ರಮ ಮತ್ತು ವ್ಯಾಯಾಮದ ಜೊತೆಗೆ ನಿಯಮಿತವಾಗಿ ಸೇವಿಸಿದರೆ ಮಧುಮೇಹ (ಸಕ್ಕರೆ ಕಾಯಿಲೆ) ನಿಯಂತ್ರಣಕ್ಕೆ ಬರುತ್ತದೆ.
ಇನ್ಸುಲಿನ್ ಮಟ್ಟವನ್ನು ನಿಯಮಿತಗೊಳಿಸುವಲ್ಲಿ ಸಹಕರಿಸುತ್ತದೆ. ಇದರಲ್ಲಿ ಮೆಗ್ನಿಷಿಯಂ ಮತ್ತು ವಿಟಮಿನ್ ಸಿ ಕಣ್ಣಿನ ದೃಷ್ಟಿ, ಜೀರ್ಣ ಶಕ್ತಿ ಮತ್ತು ಕಬ್ಬಿಣಾಂಶ ಹೆಚ್ಚಾಗುವುದು ಸಹಕಾರಿಯಾಗಿದೆ.
ನಲ್ಲಿ ಪೌಡರ್, ರಾಸಂ ಸಾಂಬಾರ್‌ ನಲ್ಲಿ ಹಾಕಿ ಸೇವಿಸುವುದರಿಂದ ಇಲ್ಲವೇ ಮೊಸರಲ್ಲಿ ಹಾಕಿ ಸೇವಿಸುವುದರಿಂದ ಜೀರ್ಣ ಶಕ್ತಿ, ಮಲಬದ್ಧತೆ ಕಡಿಮೆಯಾಗುವುದು. ಪೌಡರ್ ಅನ್ನು ಸೀಗಪುಡಿಯೊಂದಿಗೆ ಬೆರೆಸಿ ತಲೆಗೆ ಹಚ್ಚಿದಾಗ ಬಾಲ ನರೆ, ಕೂದಲು ಉದುರುವಿಕೆ ತಡೆಯುತ್ತದೆ. ಆಮ್ಲ ಎಣ್ಣೆ ಸಹ ಕೂದಲು ಉದ್ಧವಾಗಿ ಗಾಢ ಕಪ್ಪು ಬಣ್ಣ ಮತ್ತು ಹೊಳಪು ಹೊಂದಲು ಸಹಾಯ ಮಾಡುತ್ತದೆ.