ನಲ್ಲಬಂಡ ತಾಂಡಾದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ

ಗುರುಮಠಕಲ್: ಜ.19:ತಾಲೂಕಿನ ಚಪೆಟ್ಲಾ ಗ್ರಾಮಪಂಚಾಯತ್ ಮಟ್ಟದ ಶಾಲಾಮಕ್ಕಳ ಗಣಿತ ಸ್ಪರ್ಧೆಯಲ್ಲಿ ಸಮಿಪದ ನಲ್ಲಬಂಡ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಗ್ರಾಮಪಂಚಾಯತ್ ವತಿಯಿಂದ ಗಣಿತ ಕಲಿಕಾ ಅಂದೋಲನ ಸ್ಪರ್ಧೆಯು 4,5,6, ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ಸದರಿ ಸ್ಪರ್ಧೆಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಲ್ಲಬಂಡ ತಾಂಡಾ ಶಾಲೆಯ 4 ನೇ ತರಗತಿಯ ಕುಮಾರ ಲಿಂಗ್ಯ ತಂದೆ ಚಂದರ್ ಹಾಗೂ 5ನೇ ತರಗತಿಯ ವಿದ್ಯಾರ್ಥಿ ದಿನೇಶ್ ತಂದೆ ಹರಿ ಯವರು ತೃತೀಯ ಸ್ಥಾನವನ್ನು ಪಡೆದು ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಮಲ್ಲಿಕಾರ್ಜುನ ಹಾಗೂ ಸಹ ಶಿಕ್ಷಕರಾದ ಚಂದ್ರಕಾಂತ ಹೊಟ್ಟಿ ರವರು ಹರ್ಷ ವ್ಯಕ್ತಪಡಿಸಿದರು. ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು ಹಾಗೂ ಸದಸ್ಯರು ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಅಭಿನಂದನೆ ತಿಳಿಸಿದರು.