ನಲಿ-ಕಲಿ ಮಕ್ಕಳಿಗೆ ಕುರ್ಚಿ, ಬೋಧನ ಉಪಕರಣಗಳ ಕೊಡುಗೆ

(ಸಂಜೆವಾಣಿ ವಾರ್ತೆ)
ಸಿಂಧನೂರು.ಜ.೨೯- ತಾಲೂಕಿನ ಬಸವಣ್ಣ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಲಿ-ಕಲಿ ಮಕ್ಕಳಿಗೆ ಕುಳಿತು ಕೊಳ್ಳಲು ೫೦ ಕುರ್ಚಿ, ಪರೀಕ್ಷೆ ಪ್ಯಾಡ್, ಪೆನ್ನುಗಳನ್ನು ವಿತರಣೆ ಎಸ್.ಎಲ್.ವಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗಳಾದ ಎನ್.ಕೆ ವಿಶ್ವನಾಥ ವಿತರಣೆ ಮಾಡಿದರು.
ಕಲ್ಯಾಣ ಕರ್ನಾಟಕ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸದಾ ತುಡಿತ ಇರುವ ಇವರು ಸದಾ ಜ್ಞಾನರ್ಜನೆ ಜೊತೆ ಜೊತೆಗೆ ಸರ್ಕಾರಿ ಶಾಲೆ ಯಲ್ಲಿನ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಾಯ ವಾಗುವಂತೆ ೫೦ ಕುರ್ಚಿ ಗಳನ್ನು ಹಾಗೂ ಪರೀಕ್ಷಾ ಪ್ಯಾಡ್, ಪೆನ್ನು ಗಳನ್ನು ವಿತರಿಸಿದರು.
ಸರಿಯಾದ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಸ್ಥಾನ ಪಡೆದು ತಂದೆ-ತಾಯಿ, ಗುರುಗಳು, ವಿದ್ಯೆ ಪಡೆದ ಶಾಲೆಯ ಕೀರ್ತಿ ಯನ್ನು ತೆಗೆದುಕೊಂಡು ಬನ್ನಿ ಎಂದು ಶಾಲೆಯ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಗೊಳಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಯಂಕಪ್ಪ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.