ನಲಿಕಲಿ ಫೌಂಡೇಶನಿಂದ ಸ್ಕೂಲ್ ಬ್ಯಾಗ್ ವಿತರಣೆ

ಮಾನ್ವಿ,ಮಾ.೧೫- ತಾಲೂಕಿನ ಕರಡಿಗುಡ್ಡ ಗ್ರಾಮದ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ವಿದ್ಯಾರ್ಥಿಗಳಿಗೆ ನನ್ಹಿ ಕಲಿ ಫೌಂಡೇಶನಿಂದ ಉಚಿತವಾಗಿ ಶಾಲೆ ಬ್ಯಾಗ್ ವಿತರಣೆ ಮಾಡಿದರು.
ನಂತರ ನನ್ಹಿ ಫೌಂಡೇಶನ್ ಸಂಸ್ಥೆಯವರು ಮಾತಾನಾಡಿ ಬಡ ವಿದ್ಯಾರ್ಥಿಗಳಿಗೆ ಉಪಯೋಗ ಆಗಲಿ ಎನ್ನುವ ಉದ್ದೇಶದಿಂದ ಬ್ಯಾಗ್ ಜೊತೆಗೆ ಪುಸ್ತಕ, ಕಾಪಿ, ಪೆನ್, ಕಂಫಾಕ್ಸ್ ಸೇರಿದಂತೆ ವಿದ್ಯಾರ್ಥಿಗಳಿಗೆ ಬೇಕಾಗುವ ಸಾಮಗ್ರಿಗಳು ವಿತರಣೆ ಮಾಡಲಾಯಿತು ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ರಾಜೇಶ್ವರಿ, ಚನ್ನಮ್ಮ, ಲಕ್ಷ್ಮೀ, ಶಾಲೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರರು ವಿದ್ಯಾರ್ಥಿಗಳು ಇದ್ದರು.