ನಲಿಕಲಿ ಪಾಠೋಪಕರಣಕ್ಕೆ ಮೆಚ್ಚುಗೆ


ನವಲಗುಂದ,ಮಾ.21- ಇಲ್ಲಿನ ಬಸವೇಶ್ವರ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಪ್ರಸನ್ನಕುಮಾರ್ ಇವರು ಭೇಟಿ ನೀಡಿ ನಲಿಕಲಿ ಪಾಠೋಪಕರಣ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊರೊನಾ ಎಲ್ಲ ಮಾರ್ಗಸೂಚಿ ಅನುಸರಿಸಲು ಸೂಚಿದರು. ನಗರದ ಸ ಹಿ ಪ್ರಾ ಶಾಲಾ ನಂ 4 ರ ಶಾಲಾ ,ಹಾಗೂ ಆರೆಕುರಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಕಾರ್ಯ ವಿಕû?ಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕಿನ ಎಸ್.ಎಸ್.ಎಲ್. ಸಿ ಫಲಿತಾಂಶ ಸುಧಾರಣೆ ಸರಕಾರಿ ಖಾಸಗಿ ಶಾಲಾ ಶಿಕûಕರ ಕಾರ್ಯಾಗಾರಕ್ಕೆ ಬೇಟೆ ನೀಡಿ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ಅಧಿಕಾರಿಗಳಾದ ಎಸ್.ಎಮ್. ಹುಡೇದಮನಿ , ಶಿವಲೀಲಾ ಕಳಸ, ಭಾಗೀರಥಿ ಮಳಲಿ, ಪ್ರಭಾರ ಬಿ.ಇ.ಓ. ರಾಮು ಚವ್ಹಾಣ, ಶಿಕûಕ ಸಂಘದ ರಾಜ್ಯ ಉಪಾಧ್ಯಕ್ಷ ವಾಯ್.ಎಚ್.ಬಣವಿ , ತಾಲೂಕಾ ಅಧ್ಯಕ್ಷ ಎಸ್ ಎಫ್ ನೀರಲಗಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎ.ಬಿ ಕೊಪ್ಪದ , ಗುರುಗಳಾದ ಎಸ್.ಎನ್, ಬೆಂಚಿಗೇರಿ, ಎನ್ ವಾಯ್ ಕಳಾಸಾಪೂರ, ಸಿ.ಆರ್.ಪಿ ಎಮ್.ಎಚ್ ಚಿಕನಾಳ ,ಶ್ರೀನಿವಾಸ ಅಮಾತ್ಯನವರ, ಉಪಸ್ಥಿತರಿದ್ದರು.