ನಲಿಕಲಿಯಿಂದ ಜ್ಞಾಪಕ ಶಕ್ತಿ ಅಧಿಕ


ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.04: ಪ್ರಾಥಮಿಕ ಹಂತದ ಮಕ್ಕಳಲ್ಲಿ ಅದರಲ್ಲೂ ನಲಿಕಲಿ ಮಕ್ಕಳಲ್ಲಿ ಜ್ಞಾನಪಕ ಶಕ್ತಿ ಪ್ರಮಾಣ ಅಧಿಕವಾಗಿರುತ್ತದೆ.ಈ ಹಂತದಲ್ಲಿ ಮಕ್ಕಳು ನಲಿಯುತ್ತ,ಆಡುತ್ತಾ, ಕುಣಿಯುತ್ತಾ ಗುಂಪುಗಳಲ್ಲಿ ಸಂತಸದಿಂದ, ಆಸಕ್ತಿದಾಯಕವಾಗಿ ಕಲಿಯುತ್ತಾರೆ. ಚಿತ್ರಗಳಿಗೆ ಬಣ್ಣ ತುಂಬುವುದು ಎಂದರೆ ಮಕ್ಕಳಿಗೆ ತುಂಬಾ ಇಷ್ಟ.ಕಾರ್ಡ್ ಗಳನ್ನು ಓದುವುದು, ಸರಳ ಗಣಿತ ಮಾಡುವುದರಲ್ಲಿ ಉತ್ಸುಕರಾಗಿರುತ್ತಾರೆ.ಏಕೆಂದರೆ ಒಂದರಿಂದ ಮೂರನೇ ತರಗತಿಯ ಮಕ್ಕಳು ಒಂದೇ ಕಡೆ ಗುಂಪಗಳಲ್ಲಿ,ತಟ್ಟೆಗಳ ಸುತ್ತ,ಶಿಕ್ಷಕರೊಂದಿಗೆ ಕುಳಿತು ಕಲೆಯುವುದರಿಂದ ಮಕ್ಕಳಲ್ಲಿ ಹೊಸ ಅನುಭವ ಉಂಟಾಗುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಗುಣಾತ್ಮಕ ಶೈಕ್ಷಣಿಕ ವರ್ಷ 2023-24 ಎಂದು ಘೋಷಣೆ ಮಾಡಿ, ಆರಂಭದ ದಿನಗಳಲ್ಲಿ ಒಂದನೇ ತರಗತಿಗೆ ವಿದ್ಯಾಪ್ರವೇಶ ಹಾಗೂ ಎರಡನೇ ತರಗತಿಯಿಂದ ಹತ್ತನೇ ತರಗತಿ ವರೆಗೆ ಸೇತುಬಂಧ ಪಾಠಗಳು ನಡೆಯುತ್ತವೆ ಎಂದು ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ರವಿಚೇಳ್ಳಗುರ್ಕಿ ಹೇಳಿದರು.

One attachment • Scanned by Gmail