ನರ್ಸ ಸೇವೆ ಪವಿತ್ರ ಕೆಲಸ: ಡಾ.ಶಫೀ ಬಾನದ

ವಾಡಿ:ಮೇ.13: ಆಪತ್ತಿನ ಸಮಯದಲ್ಲಿ ಆಪತ್ತು ಭಾಂದವರಾಗಿ ರೋಗಿಗಳ ನಿಸ್ವಾರ್ಥ ಸೇವೆ ಸಲ್ಲಿಸುವ ನರ್ಸಗಳ ಕೆಲಸ ಪವಿತ್ರವಾದದ್ದು ಎಂದು ಎಸಿಸಿ ಆಸ್ಪತ್ರೆಯ ಹಿರಿಯ ವೈಧ್ಯಾಧಿಕಾರಿ ಡಾ. ಶಫೀ ಸಾಹೇಬ ಬಾನದ ಹೇಳಿದರು.
ಪಟ್ಟಣದ ಎಸಿಸಿ ಕಂಪನಿಯ ಆಸ್ಪತ್ರೆಯಲ್ಲಿ ವಿಶ್ವ ನರ್ಸ ದಿನದ ಅಂಗವಾಗಿ ದಾದಿ (ಫ್ಲಾರೆನ್ಸ್ ನೈಟಿಂಗೇಲ್) ಅವರ ಹುಟ್ಟು ಹಬ್ಬದ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಮಾತನಾಡಿದರು.
ಜನರ ಸೇವೆ ಮಾಡುವುದು ವೈದ್ಯ ವೃತ್ತಿಯ ಆದ್ಯ ಕರ್ತವ್ಯವಾಗಿದೆ. ಆಪತ್ತು ಕಾಲದಲ್ಲಿ ದಾದಿಯರು ಸಲ್ಲಿಸುವ ನಿಶ್ವಾರ್ಥ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಸ್ಮರಿಸಿದರು.
ಆಸ್ಪತ್ರೆಯ ದಾದಿಯರಾದ ಸವಿತಾ ಕೆಂಭಾವಿ, ಜಿ.ಜಿ ಶ್ಯಾಮರಾವ್, ಮಲ್ಲಿಕಾರ್ಜುನ, ಶೇಖಪ್ಪ ಹೇರೂರ, ಕೃಷ್ಣ ಕರ್ಲಿ, ಅಂಬುಲೆನ್ಸ್ ಚಾಲಕ ಆನಂದ ಗಂಗನೊರ ಇದ್ದರು.