ನರ್ಸ್ ಅನಧಿಕೃತ ಗೈರು ;ಕ್ರಮ ಡಿಹೆಚ್‌ಓ

ಸಿಂಧನೂರು.ಏ.೭-ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಅನಧಿಕೃತ ಗೈರು ತಾಯಿ ಕಾರ್ಡಿಗೆ ಹಣ ಪಡೆಯುವ ಬಗ್ಗೆ ಪತ್ರಿಕೆಯಲ್ಲಿ ವರದಿ ಬಂದಿದ್ದು ವರದಿಗೆ ಸ್ಪಂದಿಸಿದ ಡಿಹೆಚ್‌ಓ ನರ್ಸ್‌ಗೆ ನೋಟಿಸ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತೇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಡಾ.ಸುರೇಂದ್ರ ಬಾಬು ಪತ್ರಿಕೆಗೆ ತಿಳಸಿದರು.
ತಾಲೂಕಿನ ಉಮಲೂಟಿ ಆರೋಗ್ಯ ಉಪ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಪ್ರಮೀಳಾದೇವಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಅಲ್ಲದೆ ಮಹಿಳೆಯರಿಂದ ತಾಯಿ ಕಾರ್ಡ್‌ಗೆ ಲಂಚ ತೆಗೆದುಕೊಳ್ಳುತ್ತಿದ್ದು ಹಳ್ಳಿಗಳಿಗೆ ಹೋಗಿ ಜನರ ಆರೋಗ್ಯ ನೋಡದೆ ಉಮಲೂಟಿಯಲ್ಲಿ ಇರುತ್ತಾಳೆ. ಅಲ್ಲದೆ ಸರ್ಕಾರದಿಂದ ಬಂದ ಔಷಧಿಗಳನ್ನು ಉಚಿತವಾಗಿ ನೀಡದೆ ಹಣ ತೆಗೆದುಕೊಂಡು ಚಿಕಿತ್ಸೆ ನೀಡುವ ಬಗ್ಗೆ ಸಾರ್ವಜನಿಕರ ದೂರಿನ ಮೇಲೆ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು.
ವರದಿಗೆ ಸ್ಪಂದಿಸಿದ ಡಿಹೆಚ್‌ಓ ಡಾ.ಸುರೇಂದ್ರ ಬಾಬು ಕೂಡಲೇ ನರ್ಸ್‌ಗೆ ನೋಟಿಸ್ ನೀಡಿ ಕ್ರಮ ಕೈಗೊಂಡ ಬಗ್ಗೆ ವರದಿ ನೀಡುವಂತೆ ತುರುವಿಹಾಳ ಆಸ್ಪತ್ರೆಯ ಡಾ.ರಮೇಶಗೆ ಆದೇಶ ಮಾಡಿದ್ದೇನೆ ಎಂದು ಪತ್ರಿಕೆಗೆ ಮಾಹಿತಿ ನೀಡಿದರು.
ಈ ಕುರಿತು ಡಾ ರಮೇಶ ಯವರನ್ನು ಪತ್ರಿಕೆ ಮಾತನಾಡಿಸಿದಾಗ ಡಿಹೆಚ್‌ಒ ಸೂಚನೆ ಮೇರೆಗೆ ಪತ್ರಿಕೆಯ ವರದಿ ಆಧರಿಸಿ ಉಮಲೂಟಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಗೆ ನೋಟಿಸ ನೀಡಲಾಗಿದ್ದು ಉತ್ತರ ನೀಡಿದ ಮೇಲೆ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಮೇಲಾದಿಕಾರಿಗಳಿಗೆ ವರದಿ ಕಳಿಸಲಾಗುತ್ತೇದೆ ಡಾ.ರಮೇಶ ಪತ್ರಿಕೆಗೆ ಸ್ಪಷ್ಟನೆ ನೀಡಿದರು.