ನರೋಣಾ: ಸಕ್ಷಮ ಕೇಂದ್ರ ಉದ್ಘಾಟನೆ

ಕಲಬುರಗಿ,ಸೆ 10: ಅಳಂದ ತಾಲೂಕಿನ ನರೋಣಾ ಗ್ರಾಮ ಪಂಚಾಯತಿಯಲ್ಲಿ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಹಣಕಾಸಿನ ಸಾಕ್ಷರತೆಯನ್ನು ನೀಡುವ ಉದ್ದೇಶದಿಂದ ಸಕ್ಷಮ ಕೇಂದ್ರ ವನ್ನು ಉದ್ಘಾಟಿಸಲಾಯಿತು .ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ,ನರೋನಾ ಗ್ರಾಪಂ ಅಧ್ಯಕ್ಷರಾದ ಚಂದಮ್ಮ ಬಿ ರಾಗಿ,ಶಾರದಾಂಬೆ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಅಧ್ಯಕ್ಷರಾದ ಸವಿತಾ ವಿ ಬಾಳಿ ಮತ್ತು ಪಿಡಿಒ ರಾಜೇಶ್ವರಿ ಅವರು ಜ್ಯೋತಿ ಬೆಳಗಿಸುವದರೊಂದಿಗೆ ಕಾರ್ಯ ಕ್ರಮಕ್ಕೆ ಚಾಲನೆಯನ್ನು ನೀಡಿದರು. ಕಾರ್ಯ ಕ್ರಮವನ್ನು ಉದ್ದೇಶಿಸಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಅವರು ಮಾತನಾಡಿ ಸ್ವ ಸಹಾಯ ಸಂಘದ ಮಹಿಳೆಯರು ಒಂದೆ ರೀತಿಯ ಆರ್ಥಿಕ ಚಟುವಟಿಕೆಗಳು ಮಾಡದೆ ವಿವಿಧ ಬಗೆಯ ಆರ್ಥಿಕ ಚಟುವಟಿಕೆಗಳು ಮಾಡಿ ಹೆಚ್ಚಿನ ಆದಾಯ ಪಡೆಯಬೇಕು ಹಾಗೂ ಸಂಕ್ಷಮ ಕೇಂದ್ರದ ಸದುಪಯೋಗವನ್ನು ಪ್ರತಿ ಸ್ವಸಹಾಯ ಸಂಘದ ಸದಸ್ಯರು ಪಡೆಯಬೇಕು. ಮತ್ತು ಜಿಪಿಎಲ್ ಎಫ್ ಕಛೇರಿಗಾಗಿ ಮುಂದಿನ 3 ತಿಂಗಳಲ್ಲಿ ನರೇಗಾದಡಿಯಲ್ಲಿ ಸಂಜೀವಿನಿ ಎಸ್ ಎಚ್ ಜಿ ಶೆಡ್ ನಿರ್ಮಾಣ ಮಾಡಿಸಿ ಕೊಡುವುದಾಗಿ ತಿಳಿಸಿದರು. ಜಿಪಂ ವೈಪಿ ಸುಮಿತ್ರಾ ಮಾತಾಡಿ ಸಕ್ಷಮ ಕೇಂದ್ರದ ಗುರಿ ಮತ್ತು ಉದ್ದೇಶವನ್ನು ತಿಳಿಸಿದರು. ಅದೆ ರೀತಿ ಬ್ಯಾಂಕ್ ಎಫ್ ಎಲ್ ಸಿ ರೇವಣ ಸಿದ್ದಪ್ಪ ಗಂಟಿ ರವರು ಮಾತಾಡಿ ಸ್ವ ಸಹಾಯ ಸಂಘದ ಸದಸ್ಯರು ಸಾಮಾಜಿಕ ಭದ್ರತೆಯ ವಿಮೆಗಳನ್ನು ಎಲ್ಲಾ ಸದಸ್ಯರು ಪಡೆಯಬೇಕಾಗಿ ತಿಳಿಸಿದರು. .ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕ ದೀಪಕ್ ಪ್ರಸ್ತಾವಿಕವಾಗಿ ಮಾತನಾಡಿದರು. ತಸ್ಲಿಮ್ ಖಜೂರಿ ನಿರೂಪಿದರು. ವಿನೋದ ಸ್ವಾಗತಿಸಿ,ನಾಗರಾಜ ವಂದಿಸಿದರು.