ನರೋಣಾ: ಡಾ. ಅಂಬೇಡ್ಕರ್ 132ನೇ ಜಯಂತಿ ಆಚರಣೆ

ಆಳಂದ: ಎ.15:ತಾಲೂಕಿನ ನರೋಣಾ ಗ್ರಾಮದ ಜೈಭೀಮ ನಗರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ಗ್ರಾಪಂ ಅಧ್ಯಕ್ಷ ಶ್ರೀನಾಥ ಚಿಚಗೋಟಿ ಪೂಜೆ ನೆರವೇರಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ನರೋಣಾ ಪೊಲೀಸ್ ಠಾಣೆಯ ಪಿಎಸ್‍ಐ ದಿನೇಶ ಅವರು ಮಾತನಾಡಿದರು. ಬಿಎಸ್‍ಎಫ್ ಯೋಧ ಗುರುನಾಥ ಬಿ. ಕೋರೆ ಧ್ವಜಾರೋಹಣ ನೆರವೇರಿಸಿದರು. ಪಂಚಶೀಲ ಧ್ವಜಾರೋಹಣ ನೆರವೇರಿಸಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕ ಸಂಘಟನಾ ಸಂಚಾಲಕ ಶಿವಪುತ್ರ ರಾಗಿ, ಚಂದ್ರಕಾಂತ್ ಕೆ. ಕೋರೆ, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ಮದಲಿ, ಮಂಜುನಾಥ್ ಕೋರೆ ಎಸ್‍ಡಿಎಂಸಿ ಸದಸ್ಯ ಕೈಲಾಸ ರಾಗಿ, ಯುವ ಮುಖಂಡರು ವಿಜಯಕುಮಾರ್ ಮೇಲಕೆರೆ, ಸ್ತ್ರೀ ಶಕ್ತಿ ಸಂಘದ ಸರ್ವ ಸದಸ್ಯರು ಜೈ ಭೀಮ್ ನಗರದ ಹಿರಿಯರು ಹಾಗೂ ಯುವಕ ಯುವತಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.