ನರೇಶ್ ಪವಿತ್ರಾ ವಿವಾಹ

ಹೈದರಾಬಾದ್ ,ಮಾ.೧೦- ತೆಲುಗು ನಟ ನರೇಶ್ ಅವರು ಕನ್ನಡ ನಟಿ ಪವಿತ್ರಾ ಲೋಕೇಶ್ ಅವರನ್ನು ಕೈ ಹಿಡಿದಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆಪ್ತರ ಸಮ್ಮುಖದಲ್ಲಿ ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದಾರೆ.ಈ ಮೂಲಕ ಹಲವು ದಿನಗಳ ಊಹಾ ಪೋಹಕ್ಕೆ ತೆರೆ ಎಳೆದಿದ್ದಾರೆ.

ಹೊಸ ವರ್ಷದ ಆರಂಭದಲ್ಲಿ ನಟ ನರೇಶ್ ಅವರು ನಟಿ ಪವಿತ್ರಾ ಲೋಕೇಶ್ ತುಟಿಗೆ ತುಟಿ ಚುಂಬಿಸುವ ಮೂಲಕ ನಾವಿಬ್ಬರೂ ಶೀಘ್ರ ಮದುವೆಯಾಗುವುದಾಗಿ ತಮ್ಮ ಸಂಬಂಧವನ್ನು ಅಧಿಕೃತವಾಗಿ ಪ್ರಕಟಿಸಿದ್ದರು.

ಈ ವಿಷಯವನ್ನು ನಟ ನರೇಶ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.ತೆಲುಗು ಚಿತ್ರರಂಗದ ಖ್ಯಾತ ನಟ ಕೃಷ್ಣ ಅವರ ಪುತ್ರ ನರೇಶ್ , ತೆಲುಗಿನಲ್ಲಿ ಪ್ರಿನ್ಸ್ ಎಂದೇ ಕರೆಸಿಕೊಂಡಿರುವ ಮಹೇಶ್ ಬಾಬು ಅವರ ಸಹೋದರ.

ಇನ್ನು ಪವಿತ್ರಾ ಲೋಕೇಶ್ ಕನ್ನಡ ಚಿತ್ರರಂಗ ಕಂಡ ಅಪರೂಪದ ಹಾಸ್ಯ ಕಲಾವಿದ ಮೈಸೂರು ಲೋಕೇಶ್ ಅವರ ಪುತ್ರಿ. ಕನ್ನಡದ ಖ್ಯಾತ ಖಳನಟ ಆದಿಲೋಕೇಶ್ ಸಹೋದರಿ ಈಕೆ

ನಟ ನರೇಶ್ ಅವರಿಗೆ ಇದು ನಾಲ್ಕನೇ ಮದುವೆಯಾಗಿದ್ದು ಪವಿತ್ರಾ ಲೋಕೇಶ್ ಗೆ ಮೂರನೇ ಮದುವೆಯಾಗಿದೆ. ಇಬ್ಬರು ಗಂಡುಮಕ್ಕಳು ಕೂಡ ಇದ್ದಾರೆ. ನರೇಶ್ ಅವರ ಮೊದಲ ಪತ್ನಿಯರಿಗೆ ಮಕ್ಕಳೂ ಇದ್ದಾರೆ.

ಇತ್ತೀಚೆಗೆ ಅವರ ಮೂರನೇ ರಮ್ಯಾ ರಘುಪತಿ ಅವರು ಪವಿತ್ರಾ ಲೋಕೇಶ್ ವಿಷಯವಾಗಿ ರಂಪ ರಾಮಾಯಣ ಮಾಡಿದ್ದರು. ಈ ವಿಷಯ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಬಾರಿ ಸದ್ದು ಮಾಡಿತ್ತು.ಮೈಸೂರಿನ ಹೋಟೆಲ್ ನಲ್ಲಿ ನಡೆದ ಘಟನೆ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು.