ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಜೂ.24: ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಕಾರ್ಮಿಕರಿಗೆ 100 ದಿನ ಹೆಚ್ಚುವರಿ ಕೂಲಿ ಕೆಲಸ ನೀಡಬೇಕು ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಒತ್ತಾಯಿಸಿದೆ.
ತಾಲೂಕಿನ ಸೋಗಿ ಗ್ರಾಮದ ನರೇಗಾ ಕಾಮಗಾರಿ ಸ್ಥಳದಲ್ಲಿ ಸಂಘಟನೆಯ ಪದಾಧಿಕಾರಿಗಳು ಕಾರ್ಮಿಕರಿಗೆ ಅರಿವು ಮೂಡಿಸಿ, ಹೆಚ್ಚುವರಿ ಕೂಲಿ ಕೆಲಸ ನೀಡಲು ಒತ್ತಾಯಿಸಿದರು.
ಗ್ರಾಕೂಸ ಸಂಘಟನೆಯ ಸಂಚಾಲಕ ಶಬ್ಬೀರ ಬಾಷಾ ಮಾತನಾಡಿ, ಸದ್ಯ ಮಳೆಯಿಲ್ಲದೇ ಬರದ ಛಾಯೆ ಆವರಿಸಿದ್ದು, ಕಾರ್ಮಿಕರಿಗೆ ಕೆಲಸ ಇಲ್ಲದಾಗಿದೆ. ನರೇಗಾ ಯೋಜನೆಯಡಿ ಎಲ್ಲ ಕಾರ್ಮಿಕರಿಗೆ 100 ದಿನ ಹೆಚ್ಚುವರಿ ಕೂಲಿ ಕೆಲಸ ನೀಡಿ ಸರ್ಕಾರ ನೆರವಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಐ. ಮಹಾಬಲೇಶ, ಕಾಶೀಂಸಾಬ್, ಪ್ರಕಾಶ್, ಕರಿಬಸಪ್ಪ, ದುರುಗಪ್ಪ, ಹಾಲೇಶ, ಮಲ್ಲಪ್ಪ, ರಶೀದ್, ಇಲಾಜ್, ಗೋಣೆಪ್ಪ, ಪ್ರವೀಣ, ಬೀರಪ್ಪ, ಮಲ್ಲಪ್ಪ, ವೀರೇಶ, ಮಂಜುನಾಯ್ಕ, ಅರುಣ, ಲೋಕೇಶ, ನರೇಂದ್ರ ಉಪಸ್ಥಿತರಿದ್ದರು.