ನರೇಗಾ ಸ್ಥಳದಲ್ಲಿ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ


ಬಳ್ಳಾರಿ,ಜೂ.09 : ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಾಮಾಜಿಕ ಅರಣ್ಯ ವಲಯ ಇಲಾಖೆಯಡಿ  ಹಲಕುಂದಿ ಗ್ರಾಮದ ಗುಡ್ಡದಲ್ಲಿ ಕಂದಗಳ ನಿರ್ಮಾಣ ಮಾಡುವ ಕಾಮಗಾರಿಯಲ್ಲಿ ತೊಡಗಿದ್ದ 500 ಜನ ಕೂಲಿ ಕಾರ್ಮಿಕರಿಗೆ ಗುರುವಾರದಂದು ಆರೋಗ್ಯ ಇಲಾಖೆ ಮತ್ತು ಕೆಹೆಚ್‍ಪಿಟಿ ಸಂಸ್ಥೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಆರಂಭಿಸಿರುವ ಗ್ರಾಮ ಪಂಚಾಯತಿ ಅರೋಗ್ಯ ಅಮೃತ ಅಭಿಯಾನದಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ “ಗ್ರಾಮ ಆರೋಗ್ಯ ಅಭಿಯಾನ  ಶಿಬಿರಗಳನ್ನು” ಏರ್ಪಡಿಸಲಾಗಿದೆ.
ಬಳ್ಳಾರಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಬಾರಿಕೇರ್ ಅವರು ಮಾತನಾಡಿ, ತಾಲೂಕಿನ 25 ಗ್ರಾಮ ಪಂಚಾಯತಿಗಳ ಪೈಕಿ 20 ಗ್ರಾಮ ಪಂಚಾಯತಿಗಳಲ್ಲಿ ಈಗಾಗಲೇ ಕೂಲಿಕಾರರಿಗೆ ತಾಲೂಕಿನ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕೂಲಿಕಾರರು ಕೆಲಸ ಮಾಡುವ ಸ್ಥಳಗಳಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಕೈಗೊಳ್ಳಲಾಗಿದೆ ಎಂದರು.
ಪ್ರತಿ ಗ್ರಾಮ ಪಂಚಾಯತಿಗೆ ಕನಿಷ್ಟ 500 ಕೂಲಿಕಾರರಿಗೆ ಉಚಿತ ಆರೋಗ್ಯ ತಪಸಾಣೆ ಮಾಡುವ ಗುರಿ ಹೊಂದಲಾಗಿದ್ದು, ಇಲ್ಲಿಯವರಗೆ 20 ಗ್ರಾಪಂ ಗಳಲ್ಲಿ 7145 ಕೂಲಿಕಾರರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಇನ್ನೂ 5 ಗ್ರಾಮ ಪಂಚಾಯತಿಗಳಲ್ಲಿ ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಹೇಳಿದರು.
ಇಲ್ಲಿಯವರೆಗೆ 20 ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 7145 ಕೂಲಿಕಾರರಿಗೆ ತಪಾಸಣೆ ಮಾಡಲಾಗಿದ್ದು, ಮಹಿಳೆಯರು-3752, ಪುರುಷರು-3393 ಸೇರಿ ಇದರಲ್ಲಿ 1383 ಕೂಲಿಕಾರ್ಮಿಕರಿಗೆ ರಕ್ತದೊತ್ತಡ ಮತ್ತು 1020 ಕಾರ್ಮಿಕರಲ್ಲಿ ಸಕ್ಕರೆ ಖಾಯಿಲೆ ಕಂಡು ಬಂದಿದ್ದು, ಸ್ಥಳದಲ್ಲಿ ಉಚಿತವಾಗಿ ಔಷಧಿ ನೀಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಲ್ಲಾ ಕೂಲಿಕಾರ್ಮಿಕರಿಗೆ ಉಚಿತವಾಗಿ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಇನ್ನಿತರೆ ಕಾಯಿಲೆಗಳನ್ನು ಪರೀಕ್ಷಿಸಲಾಯಿತು.
ವಲಯ ಅರಣ್ಯಾಧಿಕಾರಿ, ಉಪವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳು, ಸಹಾಯಕ ನಿರ್ದೇಶಕರು(ಗ್ರಾ.ಉ), ತಾಂತ್ರಿಕ ಸಂಯೋಜಕರು, ತಾಲೂಕು ಐಇಸಿ ಸಂಯೋಜಕರು, ತಾಲೂಕು ಎಮ್‍ಐಎಸ್ ಸಂಯೋಜಕರು, ಪಿಡಿಓ, ತಾಂತ್ರಿಕ ಸಹಾಯಕರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂಗಳು ಹಾಜರಿದ್ದರು.