ನರೇಗಾ ಯೋಜನೆ ಸದ್ಬಳಿಕೆ ; ಗ್ರಾಮಸ್ಥರ ಸಂತಸ

ಜಗಳೂರು.ಸೆ.8; ನರೇಗಾ ಯೋಜನೆ ಸದ್ಬಳಿಕೆ ಮಾಡಿಕೊಂಡ ಹಿನ್ನಲೆ ಗ್ರಾಮದ ಕೆರೆಗೆ ನೀರು ಹರಿದು ಬಂದು ಅಚ್ಚುಕಟ್ಟು ಪ್ರದೇಶದ ರೈತರ ಮುಖದಲ್ಲಿ ಮಂದಹಾಸ ತುಂಬಿದೆ                  ತಾಲ್ಲೂಕಿನ ರಸ್ತೆಮಾಚಿಕೆರೆ ಗ್ರಾಮದ ಕೆರೆ ಮಳೆನೀರಿನಿಂದ ತುಂಬಿ ಜಗಮಗಿಸುತ್ತಿದೆ  ಕೆರೆಗೆ ನೀರು ಬರಲು  ಗ್ರಾಮ ಪಂಚಾಯತಿ ಅಧ್ಯಕ್ಷರ ಅವಿರತ ಶ್ರಮ ಮತ್ತು  ಜನಪ್ರತಿನಿದಿಗಳು ಹಾಗು ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನ ಮುಖ್ಯವಾಗಿದೆ.ಸುಮಾರು 10- 15 ವರ್ಷಗಳಿಂದ ರಸ್ತೆ ಮಾಚಿಕೆರೆ ಕೆರೆಗೆ ನೀರುಬಾರದೆ ಅಂತರ್ ಜಲ ಕುಸಿತವಾಗಿ  ಕುಡಿಯುವ ನೀರಿಗೂ ತಾತ್ವರ ಉಂಟಾಗಿತ್ತು ಮಳೆ ಬಂದಾಗ ಮಾತ್ರ ಸ್ವಲ್ಪ ನೀರು ಇಲ್ಲವಾದರೆ ಬರೀ ಬಂಜರು ಭೂಮಿಯಂತಿತ್ತು ಇದನ್ನ ಮನಗಂಡ   ಬಿಸ್ತುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು          

ಶ್ರೀಮತಿ ಬಸಮ್ಮ ಅವರು ಶಾಶ್ವತ ಯೋಜನೆ ರೂಪಿಸಿ ಗ್ರಾ.ಪಂ.  ವ್ಯಾ ಪ್ತಿಯಲ್ಲಿ ಪ್ರಸಕ್ತ ವರ್ಷದಲ್ಲಿ ನರೇಗಾ ಯೋಜನೆಯಡಿ ಪೀಡರ್ ಚಾನಲ್ ಅಭಿವೃದ್ಧಿ ,  ಕೆರೆ ಏರಿ ಅಭಿವೃದ್ಧಿ ,ಹಾಗು ಕೆಲಾನ್ ನವೀಕರಣ ,  ಕೆರೆ ಊಳು ತೆಗೆಯುವುದು ಸೇರಿದಂತೆ ಹಲವು ಕಾಮಗಾರಿಗಳನ್ನ ಕೈಗೊಂಡು ಗ್ರಾಮದ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವ ಜೊತೆಗೆ ಕೆರೆ ಅಬಿವೃದ್ದಿ ಸಹ ಮಾಡಿದ ಪರಿಣಾಮವಾಗಿ ಕೆರೆ ನೀರಿನಿಂದ ತುಂಬಿ ಕಂಗೊಳಿಸುತಿದೆ.  ರೈತರ ಬೋರ್ ವೆಲ್ ಗಳು ಅಂತರ್ಜಲ ಹೆಚ್ಚಾಗಿ ಸಾಕಷ್ಟು ನೀರು ಹೊರ ಬರುತ್ತಿವೆ ಹಾಗೂ ನಿಂತುಹೋದ ಬೋರ್ ವೆಲ್ ಗಳು ಪುನಃ ಆರಂಭವಾಗಿವೆ. ರಸ್ತೆ ಮಾಚಿಕೆರೆ ಕೆರೆಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ರಸ್ತೆ ಮಾಚಿಕೆರೆ, ಬುಳ್ಳಳ್ಳಿ, ಮಾಳಮ್ಮನಹಳ್ಳಿ ಬಗ್ಗೆನಹಳ್ಳಿ ಬೈರನಾಯಕನಹಳ್ಳಿ ಗಿಡ್ಡನಕಟ್ಟೆ ಗ್ರಾಮಗಳು ಬರುತ್ತವೆ  ಬಿಸ್ತುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿ ವರ್ಗದವರೆಲ್ಲರು ಸೇರಿ ಕೆರೆ ಊಳೆತ್ತುವ ಕಾಮಗಾರಿಯನ್ನು ಕೈಗೊಂಡು ಗ್ರಾಮದ ಜನರಿಂದ ಊಳೆತ್ತಿಸಿ ಯಶಸ್ವಿಯಾಗಿದೆ ಅದೇರೀತಿ ಕೆರೆಗೆ ಸಂಪರ್ಕ ಕೊಂಡಿಗಳಾಗಿರುವ ಪೀಡರ್ ಚಾನಲ್ ಗಳನ್ನ ಊಳೆತ್ತಿಸಿ ಪುನಃ ನಿರ್ಮಾಣಮಾಡಿಸಿ ಮಳೆಯ ನೀರು ಫೋಲ್ ಆಗದಂತೆ ಉತ್ತಮ ಕೆಲಸ ಮಾಡಿದುದರ ಪ್ರತಿಫಲವಾಗಿ ಇಂದು ಕೆರೆಗೆ ನೀರು ಬಂದು  ರೈತರ ಮುಖದಲ್ಲಿ ಮಂದಹಾಸ ಮೂಡಿದೆ.                                                                        ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಗ್ರಾ.ಪಂ.ಅಧ್ಯಕ್ಷೆ ಬಸಮ್ಮ  ಅದಿಕಾರ ಎನ್ನುವುದು ಶಾಶ್ವತವಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿದಿಯಾಗಿ ನಾವು ಮಾಡುವ ಕೆಲಸ ಶಾಶ್ವತವಾಗಿ ಉಳಿಯಬೇಕು ನಾನು ಅದಿಕಾರಕ್ಕೆ ಬಂದನಂತರ ಅಂತರ್ ಜಲ ಅಬಿವೃದ್ದಿ ಪಡಿಸಲು ಮೊದಲ ಆಧ್ಯತೆ ನೀಡಲಾಗಿದೆ ಹಾಗು ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮದ ಅಬಿವೃದ್ದಿಗೆ ವಿಶೇಷ ಆಧ್ಯತೆ ನೀಡಲಾಗುವುದು ರಸ್ತೆ ಮಾಚಿಕೆರೆ ಕೆರೆ ಊಳೆತ್ತುವ ಕಾಮಗಾರಿಯಿಂದ ಕೆರೆಗೆ ನೀರು ಬಂದಿರುವುದೇ ಉತ್ತಮ ನಿದರ್ಶನವಾಗಿದೆ ಅದಿಕಾರಿಗಳು ಸಹ ಸಮರ್ಪಕವಾಗಿ ಕೆಲಸ ಮಾಡಿದ್ದರಿಂದ ಇಂತಹ ಉತ್ತಮ ಕಾರ್ಯಗಳು ಸಪಲಗೊಳ್ಳುತ್ತಿವೆ ಎಂದರು  .