ನರೇಗಾ ಯೋಜನೆ ಕಾಮಗಾರಿ ವಿಕ್ಷಣೆ


ಮುನವಳ್ಳಿ,ಮೇ.30: ಸಮಿಪದ ಶಿಂದೋಗಿ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ರೈತರ ಜಮಿನುಗಳಿಗೆ ನೀರು ಒದಗಿಸುವ ನೀರಾವರಿ ಕಾಲುವೆಗಳ ಹೂಳು ತೆಗಿಯುವ ಕಾಮಗಾರಿಯನ್ನು ನೂತನ ಶಾಸಕರಾದ ವಿಶ್ವಾಸ ವೈದ್ಯ ಭೇಟಿ ನೀಡಿ ವಿಕ್ಷಣೆ ಮಾಡಿದರು.
ಕಾರ್ಯನಿರ್ವಾಹಕ ಅಧಿಕಾರಿ ಯಶವಂತ ಕುಮಾರ, ಗ್ರಾಮ ಪಂ. ಅಧ್ಯಕ್ಷರಾದ ಶ್ರೀಮತಿ ಮಾಯವ್ವ ಟೊಪೋಜಿ, ಉಪಾಧ್ಯಕ್ಷ ಬಸವರಾಜ ಮಾಯಪ್ಪನವರ, ಸದಸ್ಯರುಗಳಾದ ಡಿ.ಡಿ.ಟೋಪೋಜಿ, ಈಶ್ವರ ಯಕ್ಕೇರಿ, ಕಲ್ಲಪ್ಪ ಕುರಬಗಟ್ಟಿ ಮಲ್ಲಿಕಾರ್ಜುನ ದಸ್ತಿ, ಮುಶೆಪ್ಪ ಮುಶೆನ್ನವರ, ಫಕೀರಪ್ಪ ಮಾದರ, ಪಂಚಾಯತ ಅಭಿವೃದ್ದಿ ಅಧಿಕಾರಿ ರಮೇಶ ಬೆಡಸೂರ, ರಾಜೇಶ್ವರಿ ಬೂವಿ,
ತಾಂತ್ರಿಕ ಸಂಯೊಜಕ ಮಹಾದೇವ ಕಾಮನ್ನವರ, ನಾಗರಾಜ ಬೆಹರೆ, ಪಂಚಾಯತ ಸಿಬ್ಬಂದಿವರ್ಗ ಹಾಗೂ ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.