
ರಾಯಚೂರು,ಮಾ.೨೭- ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಬೆಂಬಲಿಸಿ ಮತ್ತು ಕಾರ್ಮಿಕ ಹಕ್ಕುಗಳ ಉಲ್ಲಂಘನೆ ಖಂಡಿಸಿ ಗ್ರಾಮೀಣ ಕೂಲಿ ಕಾರ್ಮಿಕರು ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ನರೇಗಾ ಯೋಜನೆಯಡಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಶೀಘ್ರದಲ್ಲಿ ಅನುದಾನ ಮಂಜೂರು ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎನ್ ಎಂಎಂಎಸ್ ಎಬಿಪಿಎಸ್ ಅಪ್‌ಗಳನ್ನು ಅನುರ್ಜಿತಗೊಳಿಸಬೇಕು. ಅದರಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಕೇಂದ್ರ ಸರಕಾರ ೨೦೨೩-೨೪ ಸಾಲಿನ ಬಜೆಟ್ ನಲ್ಲಿ ನರೇಗಾ ಯೋಜನೆಗೆ ೬ ಸಾವಿರ ಅನುದಾನ ಮೀಸಲಿಟ್ಟಿದೆ.ಇದರಿಂದ ನರೇಗಾ ಫಲಾನುಭವಿಗಳಿಗೆ ೨೦ ರಿಂದ ೩೦ ದಿನಗಳ ಕೆಲಸ ಮಾತ್ರ ಸಿಗುತ್ತದೆ ಇದನ್ನು ಒಂದು ಲಕ್ಷ ಕೋಟಿಗೆ ಹೆಚ್ಚಿಸಬೇಕು.
ಪ್ರತಿ ವರ್ಷದಂತೆ ಕಳೆದ ವರ್ಷ ೨೦೨೨-೨೩ ರಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡಿದ ಫಲಾನುಭವಿಗಳಿಗೆ ಎರಡು ಮೂರು ತಿಂಗಳಿಂದ ಹಣ ಸಂದಾಯವಾಗದೆ ವಿಳಂಬವಾಗಿದೆ. ಕೂಲಿ ಹಣ ೭ ದಿನಗಳ ಒಳಗಡೆ ಜಮೆ ಮಾಡಬೇಕು ತಡವಾದರೆ ಕೂಲಿ ಹಣ ಜೊತೆ ನಷ್ಟ ಪರಿಹಾರ ಕೊಡಬೇಕು.ನರೇಗಾವು ಕರೋನಾ ಸಮಯ ಹಾಗೂ ನಂತರ ದಿನಗಳಲ್ಲಿ ಹಳ್ಳಿ ಜನರಿಗೆ ಸ್ವಾಭಿಮಾನದಿಂದ ಬದುಕಲು ಮಾಡಿಕೊಟ್ಟಿದೆ ಆದ್ದರಿಂದ ಪ್ರತಿ ಕುಟುಂಬಕ್ಕೂ ವರ್ಷದಲ್ಲಿ ೨೦೦ ದಿನಗಳ ಕೆಲಸ ನೀಡಬೇಕು. ಇದರಿಂದ ಗ್ರಾಮ ಪಂಚಾಯತಿಯು ಅಭಿವೃದ್ಧಿ ಆಗಿತ್ತದೆ.
ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ ಜೊತೆಗೆ ಸಂವಿಧಾನ ಪ್ರಕಾರ ಶಾಂತಿಯುತವಾಗಿ ಹೊರಾಟ ಮಾಡುತ್ತಿರುವ ಕಾರ್ಮಿಕರಿಗೆ ಬೇರೆ ಬೇರೆ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ನಾವು ಮಾರ್ಚ ೨೬ ರಿಂದ ಕರ್ನಾಟಕದಲ್ಲಿ ರಾಜ್ಯ ಮಟ್ಟದ ಹೋರಾಟ ಪ್ರಾರಂಭಿಸಿದ್ದೇವೆ. ಬಸವಣ್ಣ ನವರು ನಮಗೆ ಕಾಯಕವೇ ಕೈಲಾಸ ಸಿದ್ಧಾಂತ ಕೊಟ್ಟಿದ್ದಾರೆ. ದುಡಿಯು ಜನರಿಗೆ ಎಲ್ಲಿ ತನಕ ಗೌರವ ಕೊಡುವದಿಲ್ಲ ಅಲ್ಲಿವರೆಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.