ನರೇಗಾ ಯೋಜನೆಯಲ್ಲಿ ಸಂಪೂರ್ಣ ದಿನ ಉದ್ಯೋಗ ನೀಡುವಂತೆ ಒತ್ತಾಯ

ವಿಜಯಪುರ :ಮಾ.1: ಮಾಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಂಪೂರ್ಣ ದಿನ ಉದ್ಯೋಗ ನೀಡದಿರುವ ಕುರಿತು ಪ್ರೊ. ಭೀ.ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಜಿಲ್ಲಾ ಶಾಖೆ ವಿಜಯಪುರ ವತಿಯಿಂದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ವಿಜಯಪುರ ಇವರಿಗೆ ಮನವಿ ಸಲ್ಲಿಸಲಾಯತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಕಂಠೀರವ ಹೊಸಮನಿ, ಮಾತನಾಡಿ, ಸಿಂದಗಿ ತಾಲೂಕ ಪೈಕಿ ಕೊಗಟನೂರ ಗ್ರಾಮದ ಖಾಯಂ ನಿವಾಸಿಗಳಿಗೆ, ಕೊಗಟನೂರ ಗ್ರಾಮ ಪಂಚಾಯತಿಯಲ್ಲಿ ಮಾಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಂಪೂರ್ಣ ದಿನ ಉದ್ಯೋಗ ಕೊಡುತ್ತಿಲ್ಲ. ಹಾಗೂ ನಿವಾಸಿಗಳಿಗೆ ಗ್ರಾಮ ಪಂಚಾಯತಿಯಲ್ಲಿ 6-ನಂ ಫಾರ್ಮ ತುಂಬಿಕೊಟ್ಟರು ಕೆಲಸ ಕೊಡುತ್ತಿಲ್ಲ. ಗ್ರಾಮ ಪಂಚಾಯತಿಯಲ್ಲಿನ ಎಲ್ಲ ಕೆಲಸಗಳನ್ನು ಮಶನರಿ ಯಂತ್ರಗಳಾದ ಜೆ.ಸಿ.ಬಿ. ಟ್ರ್ಯಾಕ್ಟರ, ಇನ್ನಿತರ ಯಂತ್ರಗಳ ಮೂಲಕ ಕೆಲಸ ಮಾಡಿಸಿ ಕೆಲಸ ನಿರ್ವಹಣೆ ಮಾಡಿಸುತ್ತಾರೆ. ಹಣ ಬಳಕೆಯು ಕೆಲಸ ಮಾಡದೆ ಇರುವವರ ಮುಖಾಂತರ ಜಾಬ್ ಕಾರ್ಡ ಮೂಖಾಂತರ ತಮಗೆ ಸಂಬಂದಪಟ್ಟವರ ಎನ್.ಎಮ್.ಆರ್ ಹಾಜರಾತಿ ಹಾಕಿ ಅವರ ಖಾತೆಗೆ ಹಣ ಜಮಾ ಮಾಡಿ ಹಣ ತೆಗೆದುಕೊಳ್ಳುತ್ತಾರೆ. ಅದೇ ರೀತಿಯಾಗಿ ದೇವರಹಿಪ್ಪರಗಿ ತಾಲೂಕಿನ ಮಣ್ಣೂರು ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ವಿನೋದ ರಾಠೋಡ ಇದ್ದು, ಸದರಿ ಅಧಿಕಾರಿ ಹಾಗೂ ಅಧ್ಯಕ್ಷರು ಸೇರಿ 15ನೇ ಹಣಕಾಸಿನಲ್ಲಿರುವ ಹಣ ಸಂಪೂರ್ಣವನ್ನು ದುರುಪಯೋಗ ಪಡೆಸಿಕೊಂಡಿರುತ್ತಾರೆ. ಅದನ್ನು ತನಿಖೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ವಹಿಸಬೇಕೆಂದು ಈ ಮೂಲಕ ಕೋರುತ್ತೇವೆ.
ಕೊಗಟನೂರ ಗ್ರಾಮದ ನಿವಾಸಿಗಳು ತುಂಬಾ ಕಡು ಬಡವರಾಗಿದ್ದು, ನಿರ್ಗತಿಕರಾಗಿದ್ದು, ಬೇರೆ ಊರಿಗೆ ವಲಸೆ ಹೋಗಿ ಕೆಲಸ ಮಾಡಲು ಆಗುವದಿಲ್ಲ. ಸ್ವತಃ ಕೊಗಟನೂರ ಊರಿನಲ್ಲಿಯೇ ಗ್ರಾಮ ಪಂಚಾಯತಿಯಲ್ಲಿ ಇದ್ದು. ಪ್ರತಿಯೊಂದು ಕುಟುಂಬಕ್ಕೆ 100 ದಿನಗಳ ವರೆಗೆ ನರೆಗಾ ಯೋಜನೆ ಅಡಿ ಉದ್ಯೋಗ ಒದಗಿಸಬೇಕು ಅಂತಾ ಸರಕಾರ ಆದೇಶವಿದ್ದರು. ಕೂಡಾ ಇಲ್ಲಿರುವ ಸ್ಥಳೀಯ ಗ್ರಾ.ಪಂ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಮತ್ತು ಗ್ರಾಪಂ ಎಲ್ಲ ಸಂಬಂದಪಟ್ಟ ಸಿಬ್ಬಂದಿಗಳು ಎಲ್ಲರೂ ಕೂಡಿ ಸರಕಾರದ ಆದೇಶವನ್ನು ಗಾಳಿಗೆ ತೂರಿ ತಮ್ಮ ಮನ ಬಂದಂತೆ ಬೇಕ ಬೇಕಾದವರಿಗೆ ನರೆಗಾ ಯೋಜನೆಯಡಿಯಲ್ಲಿ ಹಣವನ್ನು ದುರುಪಯೋಗ ಮಾಡುತ್ತಿದ್ದಾರೆ. ತಕ್ಷಣ ಬೀದಿಗೆ ಬಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಎನ್.ಭಜರಂಗಿ, ದಲಿತ ಮುಖಂಡರಾದ ಭೀಮರಾವ ಜಿಗಜಿಣಗಿ, ರಾವುತ ತಳಕೇರಿ, ಕೊಗಟನೂರ ಗ್ರಾಮದ ನಿವಾಸಿಗಳಾದ ಯಮನವ್ವ ಗೌಂಡಿ, ಕಾವೇರಿ ಬ್ಯಾಕೋಡ ಮುಂತಾದವರು ಉಪಸ್ಥಿತರಿದ್ದರು.