ನರೇಗಾ ಯೋಜನೆಯಡಿ ಬಹು ಉಪಯೋಗಿ ಕಾಮಗಾರಿಗಳನ್ನು ಕೈಗೊಳ್ಳಿ

ಮೈಸೂರು: ಫೆ.24:- ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ನಿರ್ವಹಿಸಲು ಯಾವುದೇ ಮಿತಿ ಇಲ್ಲ. ರೈತರಿಗೆ ಅನುಕೂಲವಾಗುವ ಬಹು ಉಪಯೋಗಿ ಕಾಮಗಾರಿಗಳನ್ನು ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎನ್ ಜಯರಾಮ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೆ. ಡಿ. ಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಫೆಬ್ರವರಿ ಕೊನೆಯಲ್ಲಿ ಇದ್ದು ಎಲ್ಲಾ ಅನುದಾನವನ್ನು ಸೂಕ್ತವಾಗಿ ಬಳಕೆ ಮಾಡಬೇಕು. ಯಾವುದೇ ಅನುದಾನ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಕೃಷಿ ಇಲಾಖೆಯ ಯಾಂತ್ರೀಕರಣ ಯೋಜನೆಯಲ್ಲಿ 403 ಲಕ್ಷ ಆರ್ಥಿಕ ಪ್ರಗತಿ ಸಾಧಿಸಿದ್ದರೂ ಭೌತಿಕ ಪ್ರಗತಿ ಸಾಧನೆಯ ಅಂಕಿ ಅಂಶ ಸಮಂಜಸವಾಗಿಲ್ಲ. ಸರಿಯಾದ ಅಂಕಿ ಅಂಶ ನೀಡಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದರು ಹಾಗೂ ಕ್ರಿಯಾ ಯೋಜನೆಯಲ್ಲಿ ದೊಡ್ಡ ಮೊತ್ತದ ಯಂತ್ರೋಪಕರಣಗಳಿಗೆ ಬದಲಾಗಿ ಕಡಿಮೆ ಬೆಲೆಯ ಯಂತ್ರೋಪಕರಣಗಳನ್ನು ನೀಡಿದರೆ ಸಣ್ಣ ಅತಿಸಣ್ಣ ರೈತರು ಅವುಗಳ ಪ್ರಯೋಜನ ಪಡೆದುಕೊಳ್ಳುತ್ತಾರೆಂದರು. ಒಂದು ಯೋಜನೆಯಲ್ಲಿ ಪ್ರಯೋಜನ ಪಡೆದ ರೈತರಿಗೆ ಮತ್ತೊಮ್ಮೆ ನೀಡದೆ ಬೇರೆ ರೈತರಿಗೂ ಪ್ರಯೋಜನ ಸಿಗುವಂತೆ ನೋಡಿಕೊಳ್ಳಿ ಎಂದರು
ಕೃಷಿ ಯಂತ್ರೋಪಕರಣಗಳು ಸಬ್ಸಿಡಿ ದರದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ದೊರೆಯುವಂತೆ ಆಗಬೇಕು. ಒಂದೇ ಕುಟುಂಬಕ್ಕೆ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಯೋಜನೆಗಳು ದೊರೆಯದಂತೆ ನೋಡಿಕೊಳ್ಳಬೇಕು. ನರೇಗಾ ಯೋಜನೆಯಡಿ ಕೃಷಿ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಿ ರೈತರ ಜಮೀನಿನಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಮುಂತಾದ ಕಾಮಗಾರಿಗಳನ್ನು ನಿರ್ಮಾಣ ಮಾಡುವಂತೆ ಸೂಚಿಸಿದ ಅವರು, ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದ ಎಷ್ಟು ರೈತರು ತೋಟಗಾರಿಕಾ ಬೆಳೆಗಳ ಕಡೆ ಮುಖ ಮಾಡಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರನ್ನು ಪ್ರಶ್ನಿಸಿದಾಗ ಅವರು ಉತ್ತರಿಸಿ ಈಗಾಗಲೇ 75 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳಿದ್ದು ಕಳೆದೆರಡು ವರ್ಷಗಳಲ್ಲಿ 3ರಿಂದ 4 ಸಾವಿರದಷ್ಟು ಪ್ರದೇಶ ವಿಸ್ತರಣೆಯಾಗಿರುವ ಮಾಹಿತಿ ಇದೆ ಹಾಗೂ ನಮ್ಮ ಛೇಂರ?ಗೆ ಬಂದ ರೈತರಿಗೆ ಈ ಬಗೆಗೆ ಮಾಹಿತಿ ನೀಡಿದ್ದೇನೆ ಎಂದಾಗ ಉಸ್ತುವಾರಿ ಕಾರ್ಯದರ್ಶಿಗಳು ಅವರು ನಿಮ್ಮ ಛೇಂಬರ್‍ಗೆ ಬರುವುದಲ್ಲ ನೀವು ರೈತರ ಜಮೀನುಗಳಿಗೆ ಭೇಟಿ ಕೊಡಬೇಕು, ನಮ್ಮದು ಹಾಗೂ ಕೃಷಿ ಇಲಾಖೆ ಬಹಳ ಸಿಬ್ಬಂದಿಗಳಿರುವ ಇಲಾಖೆಗಳಾಗಿದ್ದು ತಾವು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಸಾವಿರಾರು ರೈತರನ್ನು ತಲುಪಬಹುದೆಂದರು.
ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಹೆಚ್ಚಿಸಲು ವಿಶೇಷ ತರಗತಿಗಳನ್ನು ತೆಗೆದುಕೊಳ್ಳಬೇಕು. ವಿವೇಕ ಯೋಜನೆಯಡಿ 180 ಶಾಲಾ ಕೊಠಡಿಗಳ ನಿರ್ಮಾಣಕ್ಕೆ 1465 ಲಕ್ಷ ಮಂಜೂರಾಗಿದ್ದು 151 ಶಾಲೆಗಳ ಕೊಠಡಿಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ, 24 ಸರ್ಕಾರಿ ಶಾಲಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣವಾಗಿಲ್ಲ. 10 ತಿಂಗಳಿಂದ ಏನು ಕಾರ್ಯ ನಿರ್ವಹಿಸಿದ್ದೀರಿ? ಗುತ್ತಿಗೆದಾರರಿಗೆ ಕಾಮಗಾರಿ ಹಣ ಪಾವತಿಯಾಗಿಲ್ಲ. ನಾಳೆ ಸಂಜೆಯೊಳಗೆ ಗುತ್ತಿಗೆದಾರರಿಗೆ ಹಣ ಪಾವತಿಯಾಗಬೇಕು. ಇಲ್ಲದಿದ್ದಲ್ಲಿ ಸಂಬಂಧಿಸಿದ ಪಿ.ಆರ್.ಇ.ಡಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಎಲ್ಲಾ ಮಕ್ಕಳಿಗೆ ಶೇ.100% ರಷ್ಟು ವಿದ್ಯಾರ್ಥಿ ವೇತನ ನೀಡಲಾಗಿದ್ದು, ವಿದ್ಯಾರ್ಥಿನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಸಿರಿಗಂಧ ಕಿಟ್ ಮುಖಾಂತರ ಸೋಪು, ಶ್ಯಾಂಪು, ಪೇಸ್ಟ್ ಮುಂತಾದ ಸಾಮಾಗ್ರಿಗಳನ್ನು ವಿತರಿಸಲಾಗಿದೆ ಎಂದು ಸಮಾಜ ಕಲ್ಯಾಣಧಿಕಾರಿಗಳು ತಿಳಿಸಿದರು.
ಬೇಸಿಗೆ ಹತ್ತಿರ ಬರುತ್ತಿರುವುದರಿಂದ ನೀರು ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಆಗಬಾರದು ಹಾಗೂ ಎಲ್ಲಾ ಹಳ್ಳಿಗಳಿಗೂ ನೀರು ಪೂರೈಕೆಯಾಗುತಿದ್ದರೂ ಹರ್ ಘರ್ ಜಲ್ ಯಾಕೆ ಘೋಷಣೆಯಾಗಿಲ್ಲ ಎಂದು ಅಧಿಕಾರಿಗಳನ್ನು ಎನ್.ಜಯರಾಮ್ ಅವರು ಪ್ರಶ್ನಿಸಿದರು.
ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಮಾತನಾಡಿ ಉತ್ತಮ ಗುಣಮಟ್ಟದ ಭಿತ್ತನೆ ಬೀಜಗಳನ್ನು ವಿತರಣೆ ಮಾಡುವಂತೆ ನೋಡಿಕೊಳ್ಳಲಾಗುತ್ತದೆ. ಕೃಷಿ ಇಲಾಖೆಯ ಜಾಗೃತ ದಳ ಈ ಬಗ್ಗೆ ಕಾಲಕಾಲಕ್ಕೆ ಪರೀಕ್ಷೆ ಮಾಡುತ್ತಾ ಇರುತ್ತದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲು ಹಾಗೂ ಫಲಿತಾಂಶ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಂ. ಗಾಯತ್ರಿ ಅವರು ಮಾತನಾಡಿ ತೋಟಗಾರಿಕೆ ಇಲಾಖೆಯಲ್ಲಿ ನಶಿಸಿ ಹೋಗುತ್ತಿರುವ ಬೆಳೆಗಳಾದ ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ ಹಾಗೂ ಮೈಸೂರು ವೀಳ್ಯೆದೆಲೆ ಬೆಳೆಗಳನ್ನು ಬೆಳೆಯಲು ಪೆÇ್ರೀತ್ಸಾಹಿಸಲು ಸಬ್ಸಿಡಿ ನೀಡಲಾಗುತ್ತಿದೆ ಎಂದರು.
ಸಭೆಯಲ್ಲಿ ಪ್ರಾದೇಶಿಕ ಆಯುಕ್ತರಾದ ಜಿ ಸಿ ಪ್ರಕಾಶ್ ಸೇರದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಸ್ಥಿತರಿದ್ದರು.