ನರೇಗಾ ಯೋಜನೆಯಡಿ ನೇರ ಕೂಲಿ ಹಣ ಜಮೆ

ಲಕ್ಷ್ಮೇಶ್ವರ,ಏ10: `ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರ ಖಾತೆಗೆ ನೇರವಾಗಿ ಕೂಲಿ ಹಣ ಜಮೆ ಆಗುತ್ತದೆ. ಕಾರ್ಮಿಕರು ಯಾರಿಗೂ ತಮ್ಮ ಖಾತೆಯಿಂದ ಹಣವನ್ನು ತೆಗೆಸಿ ಕೊಡಬಾರದು’ ಎಂದು ಲಕ್ಷ್ಮೇಶ್ವರ ತಾಲ್ಲೂಕು ಪಂಚಾಯ್ತಿ ನರೇಗಾ ಸಹಾಯಕ ನಿರ್ದೇಶಕ ಕೃಷ್ಣಪ್ಪ ಧರ್ಮರ ಹೇಳಿದರು.
ಸಮೀಪದ ಸೂರಣಗಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯುತ್ತಿರುವ ಕಾರ್ಮಿಕರನ್ನು ಉದ್ಧೇಶಿಸಿ ಅವರು ಮಾತನಾಡಿದರು. ಪ್ರತಿ ಕುಟುಂಬಕ್ಕೆ ನೂರು ದಿನ ಕೆಲಸ ಕೊಡಬೇಕೆಂಬ ನಿಯಮದ ಮೇರೆಗೆ ಕೆಲಸ ಕೊಡಲು ಸರ್ಕಾರ ಸಿದ್ಧವಿದೆ. ಎಲ್ಲ ಕಾರ್ಮಿಕರು ಇದರ ಉಪಯೋಗ ಪಡೆದುಕೊಳ್ಳಬೇಕು. ಯೋಜನೆಯಡಿ ಕೆಲಸ ಮಾಡುವವರೆಲ್ಲರೂ ತಮ್ಮ ಆಧಾರ್ ಕಾರ್ಡ್‍ನ್ನು ಬ್ಯಾಂಕಿಗೆ ಲಿಂಕ್ ಮಾಡಿಸಿಕೊಳ್ಳಬೇಕು. ಆಧಾರ್ ಲಿಂಕ್ ಆಗದ ಹೊರತು ಕೂಲಿ ಹಣ ಖಾತೆಗೆ ಜಮೆ ಆಗುವುದಿಲ್ಲ ಎಂದರು.