ನರೇಗಾ ಯೋಜನೆಯಡಿ ಆಗುವ ಭ್ರಷ್ಟಾಚಾರ ಕ್ಕೆ ಕೊನೆ ಯಾವಾಗ

ಲಿಂಗಸೂಗೂರು.ಜೂ.೧೦-ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಹಾಗೂ ಗ್ರಾಮಿಣ ಭಾಗಗಳಲ್ಲಿನ ಕೂಲಿಕಾರರ ಜೀವನ ನಿರ್ವಹಣೆಯ ಅನುಕೂಲಕ್ಕಾಗಿ, ನಗರ ಪಟ್ಟಣಗಳಿಗೇ ಗುಳೆ ಹೋಗುವುದನ್ನು ತಪ್ಪಿಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅತ್ಯಂತ ಸಹಕಾರಿ ಆಗಿದೆ.
ಆದರೆ ಇದೇ ನರೇಗಾ ಯೋಜನೆಯಡಿ ಈಚನಾಳ ಗ್ರಾಮ ಪಂಚಾಯತ್‌ದಲ್ಲಿ ಅನೇಕ ಕಾಮಗಾರಿ ಗಳ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ೨೦೨೧-೨೨ ನೇ ಸಾಲಿನಲ್ಲಿ ಬದು ನಿರ್ಮಾಣ ಕಾಮಗಾರಿಗಳನ್ನ ಜೆಸಿಬಿ ಯಂತ್ರಗಳ ಮೂಲಕ ರಾತ್ರೋರಾತ್ರಿ ಮಾಡುತ್ತಿದ್ದಾರೆ. ಇನ್ನು ಕೆಲ ಈ ಹಿಂದೆ ನಿರ್ಮಾಣ ಮಾಡಿದ ಬದುಗಳನ್ನ ಮತ್ತೋಮ್ಮೆ ಹೊಸತು ಲೆಕ್ಕಕ್ಕೆ ಮಾಡಿ ಬಿಲ್ ಪಾವತಿ ಮಾಡಲಾಗುತ್ತಿದೆ.
ಈ ಕಳ್ಳ ದಾರಿಯ ಕಾಮಾಗಾರಿಗಳಿಗೇ ಕೆಲಸ ಹೊಗದೇ ಇರುವ ಜಾಬ್ ಕಾರ್ಡ್ ದಾರರ ಹೆಸರಿನಲ್ಲಿ ಎನ್ ಎಮ್ ಆರ್ ಸೃಜನೆ ಮಾಡುವ ಮೂಲಕ ನಕಲಿ ಕೂಲಿಕಾರರ ಬ್ಯಾಂಕ್ ಖಾತೆ ಗಳಿಗೇ ದುಡ್ಡು ಜಮಾವಣೆಯಾದ ತದನಂತರ ಆ ದುಡ್ಡು ಸಂಬಂಧಪಟ್ಟ ಅಧಿಕಾರಿಗಳು ಕೈಗೆ ಸೇರುತ್ತದೆ. ಉದ್ಯೋಗ ಖಾತ್ರಿ ಯೋಜನೆಯಡಿ ನಿಯಮದಂತೆ ಬದು ನಿರ್ಮಾಣ, ಇಂಗುಗುಂಡಿ ನಿರ್ಮಾಣ,ಕಟ್ಟಡ ನಿರ್ಮಾಣ ಕಾಮಗಾರಿ ಗಳಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಮಾತ್ರ ಕೂಲಿ ಹಣ ಪಾವತಿ ಮಾಡಬೇಕೆಂಬ ನಿಯಮವಿದೆ.
ಈ ನಿಯಮಗಳನ್ನು ಗಾಳಿಗೆ ತೂರಿ ಈಚನಾಳ ಪಿಡಿಒ, ನರೇಗಾ ಜೆಇ, ಹಾಗೂ ನರೇಗಾ ಯೋಜನೆಯಡಿ ಸಂಬಂಧಿಸಿದ ಸಿಬ್ಬಂದಿಗಳು ಭ್ರಷ್ಟಾಚಾರ ದಲ್ಲಿ ಭಾಗಿಯಾಗಿದ್ದಾರೆ. ನಿಯತ್ತಿನಿಂದ ಶ್ರಮಪಟ್ಟು ದುಡಿಯುವ ಅಸಲಿ ಕೂಲಿಕಾರರಿಗೆ ಸರಿಯಾದ ಸಮಯಕ್ಕೆ ಬರಬೇಕು,ಸರಿಯಾದ ಅಳತೆ ನೀಡಬೇಕು ಎಂಬ ನಿಯಮ ಹೇಳುವ ಜೆಇ, ಪಿಡಿಒ ಅಳತೆ ಕಡಿಮೆಯಾಗಿದೆ ಎಂದು ಕೂಲಿ ಹಣ ಕಡಿಮೆ ಜಮಾ ಮಾಡುತ್ತಾರೆ. ಆದರೆ ನಕಲಿ ಕಾಮಗಾರಿ ಗಳಿಗೇ ೨೮೯ ರೂ ದಂತೆ ಸಂಪೂರ್ಣ ಕೂಲಿ ಹಣ ಪಾವತಿ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಭ್ರಷ್ಟ ಅಧಿಕಾರಿಗಳ ಆಟಕ್ಕೆ , ಕಾನೂನು ನಿಯಮಗಳ ಉಲ್ಲಂಘನೆ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಯಾವಾಗ ಕ್ರಮ ತೆಗೆದುಕೊಂಡು ಶ್ರಮಿಕ ಕೂಲಿಕಾರರಿಗೆ ಯಾವಾಗ ನ್ಯಾಯ ದೊರಕಿಸಿಕೊಡಲು ಮುಂದಾಗುತ್ತಾರೋ ಕಾದುನೋಡಬೇಕಿದೆ.