ನರೇಗಾ ಕೆಲಸ ಸದ್ಬಳಕೆ ಮಾಡಿಕೊಳ್ಳಿ: ಗ್ರಾ.ಪಂ ಅಧ್ಯಕ್ಷ ಮರೇನಹಳ್ಳಿ ಕೆ.ತಿಪ್ಪೇಸ್ವಾಮಿ

ಸಂಜೆವಾಣಿ ವಾರ್ತೆ

ಜಗಳೂರು.ಮೇ.೧೯; :ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕೂಲಿ ಕಾರ್ಮಿಕರು ಸದ್ಬಳಕೆ ಮಾಡಿಕೊಳ್ಳಿ ಎಂದು ಗ್ರಾ.ಪಂ ಅಧ್ಯಕ್ಷ ಮರೆನಹಳ್ಳಿ ತಿಪ್ಪೇಸ್ವಾಮಿ ಸಲಹೆ ನೀಡಿದರು.ತಾಲೂಕಿನ ದೊಣ್ಣೆಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಈ ವೇಳೆ ಅಧ್ಯಕ್ಷ ತಿಪ್ಪೇಸ್ವಾಮಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ ನರೇಗಾ ಯೋಜನೆ ಅಡಿಯಲ್ಲಿ ಬರುವಂತ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ದೊಣ್ಣೆಹಳ್ಳಿ, ಅಣಬೂರು,ಹಿರೇಮಲ್ಲನಹೊಳೆ,ಮುಸ್ಟೂರು ಹನುಮಂತಪುರ, ಪಂಚಾಯಿತಿ ಅಧಿಕಾರಿಗಳು ಕಾರ್ಯದರ್ಶಿಗಳು ತಾಂತ್ರಿಕ ಸಹಾಯಕರು ವಸಲಿಗಾರರು ಡಾಟಾ ಆಪರೇಟರ್ಗಳು ಮತ್ತು ಎಫ್ ,ಟಿ ಗಳು ಗ್ರಾಮ ಕಾಯಕ ಮಿತ್ರರು ಪಂಚಾಯಿತಿ ಸಿಬ್ಬಂದಿಗಳು ಎಲ್ಲಾ ಹಳ್ಳಿಯ ಸ್ವಸಾಯ ಸಂಘಗಳ ಪ್ರತಿನಿಧಿಗಳು ಮೇಟಿಗಳು ಕೂಲಿಕಾರರುಗಳಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯ ತರಬೇತಿಯನ್ನು ನೀಡುವುದರ ಮೂಲಕ ಪಂಚಾಯಿತಿ ವ್ಯಾಪ್ತಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದರು.