ನರೇಗಾ ಕೂಲಿ ಕಾರ್ಮಿಕರು ತಪ್ಪದೇ ಮತದಾನ ಮಾಡಿ

ಚನ್ನಮ್ಮನ ಕಿತ್ತೂರ-13 ಲೋಕಸಭಾ ಚುನಾವಣೆ ಹಿನ್ನೆಲೆ ಮೇ, 7 ರಂದು ನಡೆಯುವ ಮತದಾನದಲ್ಲಿ ಎಲ್ಲ ನರೇಗಾ ಕೂಲಿ ಕಾರ್ಮಿಕರು ತಪ್ಪದೇ ಮತದಾನ ಮಾಡಿ ಎಂದು ತಾಪಂ ಇಓ ಭೀಮಪ್ಪ ತಳವಾರ ಹೇಳಿದರು.
ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಡಳಿತ, ಜಿಲ್ಲಾಸ್ವೀಪ್ ಸಮಿತಿ, ಜಿಪಂ ಮತ್ತು ತಾಪಂ ತಾಲೂಕಾ ಸ್ವೀಪ್ ಸಮಿತಿ, ತಾಪಂ ಸಂಯುಕ್ತಾಶ್ರಯದಲ್ಲಿ ಲೋಕಸಭಾ ಚುನಾವಣೆ ಕುರಿತು ತಾಲೂಕಿನ ಕಲಭಾವಿ ಗ್ರಾಪಂ ವ್ಯಾಪ್ತಿಯ ನರೇಗಾ ಕಾಮಗಾರಿಗಳಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ನಮ್ಮ ಸಂಸ್ಕøತಿ ಪ್ರಕಾರ ಪ್ರತಿಯೊಂದು ಹಬ್ಬಗಳನ್ನು ಆಚರಿಸುತ್ತೇವೆ. ಹಾಗಾಗಿ ಮತದಾನ ಮಾಡುವುದು ಒಂದು ಹಬ್ಬವಿದ್ದಂತೆ ಇದರಲ್ಲಿ ಯಾವುದೇ ಆಮಿಷಕ್ಕೊಳಗಾಗದೇ ನೈತಿಕತೆಯಿಂದ ದೇಶದ ಹಿತದೃಷ್ಟಿಯಿಂದ ಪ್ರತಿಯೊಬ್ಬ ಪ್ರಜೆಯೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ತಿಳಿಸಿದರು.
ಮತದಾರರು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನ ಮಾಡುವುದರ ಜೊತೆಗೆ ಇನ್ನೊಬ್ಬರಿಗೂ ಮತದಾನ ಅರಿವು ಮೂಡಿಸಬೇಕೆಂದರು. ಇದಕ್ಕೂ ಮೊದಲು ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಈ ವೇಳೆ ತಾಪಂ ಹಾಗೂ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಲಿಂಗರಾಜ ಹಲಕರ್ಣಿಮಠ, ತಾಲೂಕಾ ಐಇಸಿ ಸಂಯೋಜಕಿ ಎಸ್.ಬಿ. ಜವಳಿ, ಪಿಡೋ ವಿವೇಕಾನ|ಂದ |ಶಿಂ|ಧೆ, ಬಸವರಾಜ ಹೊಸಮನಿ, ಗ್ರಾಪಂ ಸಿಬ್ಬಂದಿ, ಕೂಲಿಕಾರ್ಮಿಕರಿದ್ದರು.