ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ಶಿಬಿರ ಹಾಗೂ ಮತದಾನದ ಕುರಿತು ಜಾಗೃತಿ

ಗುರುಮಠಕಲ್ :ಎ.22:ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್. ಎಸ್. ಕಾದ್ರೊಳ್ ರವರು, ಗುರುಮಠಕಲ್ ತಾಲೂಕಿನ ಅನಪೂರ ಗ್ರಾಮಕ್ಕೆ ಭೇಟಿ ನೀಡಿ, ನಸಲಾವಾಯಿ ಗ್ರಾಮದಲ್ಲಿ ಮನರೇಗಾ ಯೋಜನೆಯ ಜಲಶಕ್ತಿ ಅಭಿಯಾನ ದ ಸಮಗ್ರ ಕೆರೆ ಅಭಿವೃದ್ಧಿ ಕಾಮಗಾರಿಯಡಿ ಪ್ರಗತಿಯಲ್ಲಿದ್ದ ದೊಡ್ಡ ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಣೆ ಮಾಡಿದರು.

ಕಾಮಗಾರಿ ಸ್ಥಳದಲ್ಲಿ ನರೇಗಾ ಕೂಲಿಕಾರರಿಗೆ
ನರೇಗಾ ಯೋಜನೆಯಡಿ ಇರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲು ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಯಿತು ಹಾಗೂ ಮತದಾರರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಂಡ ಜನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ರುವ ಜನಸಾಮಾನ್ಯರು ಆರೋಗ್ಯ ಸುಧಾರಣೆ ಮಾಡಿಕೊಂಡು ನರೇಗಾ ಕೂಲಿ ಕಾರ್ಮಿಕರು ಕೆಲಸಕ್ಕೆ ಬಂದು ಆರ್ಥಿಕವಾಗಿ ಸಫಲರಾಗಿದ್ದಿರಿ ಕೆಲವರು ಇನ್ನೂ ಆಗಿಲ್ಲ ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದೀರಿ ಈಗ ನಿಮ್ಮ ನಿಮ್ಮ ಖಾತೆಗೆ ರೂಪಾಯಿ ಜಮಾ ಆಗುವುದರಿಂದ ನಿಮ್ಮ ಮನೆಯ ಖರ್ಚಿಗೆ ಬೇರೊಬ್ಬರ ಬಳಿ ಕೈಚಾಚುವ ಹಾಗಿಲ್ಲ ಈಗ ನೀವು ಕೂಲಿ ಕೆಲಸ ಮಾಡುವುದರಿಂದ ನಿಮ್ಮ ಕೈಯಲ್ಲಿ ರೂಪಾಯಿ ಇವೆ ಇಂತಹ ಕಷ್ಟ ಪಟ್ಟು ದುಡಿದಿರುವ ಹಣವನ್ನು ವೆರ್ಥ ಖರ್ಚು ಮಾಡದೆ ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಕೂಡುವದರ ಮೂಲಕ ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವದರ ಜೊತೆಗೆ ನಿಮ್ಮ ಸಂಸಾರ ಸುಖಿ ಸಂಸಾರ ಕಡೆ ಕೊಂಡೊಯುತ್ತ ಮನೆಯಲ್ಲಿ ಇದ್ದು ಗುಳೆ ಹೋಗುವುದನ್ನು ತಪ್ಪಿಸುತ್ತಿರಿ ಎಂದು ಹೇಳಿದರು. ಹಾಗೂ ಈ ಸಂದರ್ಭದಲ್ಲಿ ಮತದಾರರಿಗೆ ಮತದಾನದ ಮಹತ್ವದ ಕುರಿತು ನರೇಗಾ ಕೂಲಿ ಕಾರ್ಮಿಕರಿಗೆ ಮನಮುಟ್ಟುವಂತೆ ತಿಳಿಸಿದರು.

ಈ ವೇಳೆ ಪಿಡಿಒ. ಆರೋಗ್ಯ ಇಲಾಖೆ ಅಧಿಕಾರಿಗಳು. ಟಿ ಈ ಎ/ ಟಿ. ಐ. ಇ ಸಿ / ಬಿ ಎಪ್ ಟಿ/ ಡಿ ಇ ಒ.ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತರು ಕಾಯಕ ಬಂದುಗಳು, 156 ಜನ ನರೇಗಾ ಕೂಲಿ ಕಾರ್ಮಿಕರು ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು..