ಕಲಬುರಗಿ,ಮೇ.27-ಕಮಲಾಪುರ ತಾಲೂಕಿನ ಸ್ವಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹರ್ಚಿತಾಂಡ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಯಿತು.
ಮಹಿಳಾ ಮತ್ತು ಪುರುಷ ಕಾರ್ಮಿಕರು ಸೇರಿ 125 ಜನರಿಗೆ ಆರೋಗ್ಯ ಅಮೃತ ಯೋಜನೆಯಡಿ ಸ್ಥಳದಲ್ಲಿಯೇ ಆರೋಗ್ಯ ತಪಾಸಣೆ ನಡೆಸಲಾಯಿತು.
ರಕ್ತದ ಒತ್ತಡ, ಶುಗರ್, ರಕ್ತ ಪರೀಕ್ಷೆ, ಕಣ್ಣಿನ ಪರೀಕ್ಷೆ, ಹಲ್ಲು ಪರೀಕ್ಷೆ ಸೇರಿದಂತೆ ಇನ್ನು ಮುಂತಾದ ಪರೀಕ್ಷೆಗಳನ್ನು ಏಕ ಕಾಲಕ್ಕೆ ಮಾಡಲಾಯಿತು. ಸ್ಥಳದಲ್ಲಿ ಗ್ರಾಮ ಪಂಚಾಯತಿಯ ಅನಂತ ಕುಮಾರ್, ಸಿಬ್ಬಂದಿ ವರ್ಗದವರು ಅಧಿಕಾರಿಗಳು, ಕೆ.ಎಚ್.ಪಿ.ಟಿ ತಾಲೂಕ ಸಂಯೋಜಕರಾದ ಉಮೇಶ್ ಜಾಧವ ಮತ್ತು ಸ್ವಯಂ ಸೇವಕಿ ಭಾಗ್ಯಶ್ರೀ, ವೈದ್ಯಕೀಯ ಅಧಿಕಾರಿ ಡಾ.ಸಬೀರ ಅಲಿ ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳಾದ ಓಂಕಾರ್ ಹೊಸಮನಿ, ಆರೋಗ್ಯ ನಿರೀಕ್ಷಣಾಧಿಕಾರಿ ಪಾಟೀಲ ಮತ್ತು ಕಾರ್ಮಿಕ ವರ್ಗದವರು ಹಾಜರಿದ್ದರು.