ನರೇಗಾ ಕೂಲಿಕಾರರ ಕೆಲಸ ಮಾಡುವ ಸ್ಥಳಕ್ಕೆ ಭೇಟಿ

ರಾಯಚೂರು,ಏ.೧೬- ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರ ಆಧಾರ ಲಿಂಕ್ ಕಡ್ಡಾಯ ಜೋಡಣೆ ಮಾಡಬೇಕೆಂದು ಸಿರವಾರ ತಾ.ಪಂ.ಉ.ಖಾ. ಸಹಾಯಕ ನಿರ್ದೇಶಕರಾದ ಶರ್ಪುನೀಸಾ ಬೇಗಂ ಅವರು ಹೇಳಿದರು.
ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು, ಅತ್ತನೂರು ಗ್ರಾಮ ಪಂಚಾಯತಿ ನಿಲೋಗಲ್ ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ಕೂಲಿಕಾರರು ಕೆಲಸ ಮಾಡುತ್ತಿರುವ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿದರು.
ಕೂಲಿಕಾರರ ಹಾಜರಾತಿಯನ್ನು ಎನ್.ಎಂ.ಎಸ್.ಎಸ್. ಆ?ಯಪ್ ಮುಖಾಂತರವೇ ತೆಗೆದುಕೊಳ್ಳಬೇಕು. ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ, ಬಾಣಂತಿಯರಿಗೆ ಕೆಲಸ ಅವಧಿಯಲ್ಲಿ ವಿನಾಯಿತಿ ನೀಡಲಾಗಿದ್ದು,ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಎನ್.ಎಂ.ಆರ್.ತೆಗೆಯುವಂತೆ ಹೇಳಿದರು.
ನರೇಗಾ ಯೋಜನೆಯಡಿಯಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು.ಬಿಸಿಲಿನ ಪ್ರಕರತೆ ಹೆಚ್ಚಿರುವ ಕಾರಣ ಕೆಲಸದ ಸ್ಥಳಕ್ಕೆ ನೀರು ತೆಗೆದುಕೊಂಡು ಹೋಗಬೇಕು ಎಂದರು.
ಖಿಂಇ, ಃಈಖಿ,ಮೇಟ್,ಕೂಲಿಕಾರರು ಇದ್ದರು.