ನರೇಗಾ ಕೂಲಿಕಾರರಿಗೆ ಶರ್ಟ್ ಮತ್ತು ಕ್ಯಾಪ್ ವಿತರಣೆ

ರಾಯಚೂರು.ಜು.೨೦ ತಾಲೂಕಿನ ತಲಮಾರಿ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಳೆದ ವರ್ಷ ೧೦೦ದಿನಗಳು ಪೂರೈಸಿದ ೫೪ ಜನ ಕೂಲಿಕಾರರ ಕುಟುಂಬದವರಿಗೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ ಅವರು ಶರ್ಟ್ ಮತ್ತು ಕ್ಯಾಪ್‌ಗಳನ್ನು ವಿತರಣೆ ಮಾಡಿದರು.
ಈ ವೇಳೆ ಮಾತನಾಡಿ, ಅವರು ನರೇಗಾ ಯೋಜನೆಯನೆಯು ಗ್ರಾಮೀಣ ಸಮುದಾಯವನ್ನು ಅರ್ಥಿಕವಾಗಿ ಸದೃಡ ಪಡಿಸುವಲ್ಲಿ ಬಹು ಮುಖ್ಯವಾದ ಯೋಜನೆಯಾಗಿದೆ. ಇಂತಹ ಯೋಜನೆಯಲ್ಲಿ ಸ್ಥಳೀಯವಾಗಿ ಸ್ವ-ಗ್ರಾಮದಲ್ಲಿ ೧೦೦ದಿನಗಳ ಉದ್ಯೋಗ ಪಡೆದುಕೊಳ್ಳುವ ವಿಫಲು ಅವಕಾಶಗಳಿವೆ. ಇದರ ಲಾಭ ಪಡೆದುಕೊಂಡು ನೆಲ, ಜಲ ಸಂರಕ್ಷಣೆ ಮಾಡಿ ಗ್ರಾಮಾಭಿವೃದ್ಧಿ ಪೂರಕವಾಗಿರಬೇಕೆಂದು ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರು, ರಾಯಚೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಪಿಡಿಒ, ಜಿಲ್ಲಾ ಹಾಗೂ ತಾಲೂಕ ಐಇಸಿ ಸಂಯೋಜಕರು, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಡಿಇಒ, ಕರವಸೂಲಿಗಾರರು, ಗ್ರಾಮ ಕಾಯಕ ಮಿತ್ರ ಮತ್ತು ಕೂಲಿಕಾರರು ಭಾಗವಹಿಸಿದ್ದರು.