
ಸಿಂಧನೂರು,ಏ.೨೭- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನ ಆರ್.ಹೆಚ್ ನಂ. ಕ್ಯಾಂಪ್ ೧ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೇ.೧೦ ರಂದು ನಡೆಯುವ ವಿಧಾನ ಸಭೆಯ ಚುನಾವಣೆಯಲ್ಲಿ ನೆರೇಗಾ ಕೂಲಿಕಾರರು ತಪ್ಪದೆ ಮತದಾನ ಮಾಡಬೇಕು ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮಗೆ ಕೆಲಸ ನೀಡುವ ಜೊತೆಗೆ ನಿಮ್ಮ ಆರೋಗ್ಯವನ್ನು ಕಾಪಾಡಲಾಗುತ್ತದೆ ಎಂದು ಗ್ರಾಮ ಪಂಚಾಯಿತಿಯ ಪಿಡಿಒ ಪೂರ್ಣಿಮ ಮಾತನಾಡಿದರು.
ಕೂಲಿಕಾರರಿಗೆ ೩೦೯ ರೂ.ಯಿಂದ ಈಗ ೩೧೬ ರೂ ಹೆಚ್ಚಿಸಲಾಗಿದೆ. ಪುರಸ ಮತ್ತು ಮಹಿಳೆಯರ ಸಮಾನ ಕೆಲಸಕ್ಕೆ ಸಮಾನ ಕೂಲಿ ನೀಡಲಾಗುತ್ತಿದೆ. ಮತದಾನ ನಮಗೆ ಸಂವಿಧಾನ ನೀಡಿದ ಒಂದು ವರವಾಗಿದೆ ಎಲ್ಲರು ತಪ್ಪದೆ ಮತಗಟ್ಟಿಗೆ ಹೋಗಿ ಮತದಾನ ಮಾಡುವಂತೆ ಪಿಡಿಒ ಪೂರ್ಣಿಮ ಮನವಿ ಮಾಡಿಕೊಂಡರು.
ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಶೇಖರ ನಾಯಕ, ಸಂಜೀವ ಮೂರ್ತಿ, ಆಶಾ ಕಾರ್ಯಕರ್ತೆಯಾದ ಅಂಜಮ್ಮ ಸೇರಿದಂತೆ ಸಾರ್ವಜನಿಕರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.