ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಲಬುರಗಿ:ಜೂ.3: ಜಿಲ್ಲೆಯ ಅಫಜಲಪುರ ತಾಲ್ಲೂಕು ಪಂಚಾಯತ ವ್ಯಾಪ್ತಿಯ ಬಿದನೂರು ಗ್ರಾಮ ಪಂಚಾಯತಿಯ ಗೊಬ್ಬುರ ಕೆ ಗ್ರಾಮದಲ್ಲಿ ಕ್ಯಾನಲ್ ಹೊಳೆತ್ತುವ ಕಾಮಗಾರಿ ಸ್ಥಳದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಒಂದು ದಿನದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಮಾನ್ಯ ಕಾರ್ಯನಿರ್ವಾಹಕ ರಮೇಶ ಸುಲ್ಫಿ ಚಾಲನೆ ನೀಡಿ ಮಾತನಾಡಿದರು.

ನಿಮ್ಮ ಮನೆ ಬಾಗಿಲಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರ ನಡೆಯುತ್ತಿದೆ, ಕೂಲಿ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು, ಯಾವುದೇ ಒಂದು ಕಾಯಿಲೆ ಚಿಕ್ಕ ಪ್ರಮಾಣದಲ್ಲಿ ಇದ್ದಾಗೆ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮದ ಜನರು ಉಚಿತ ಆರೋಗ್ಯ ತಪಾಸಣೆ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೂಲಿ ಕಾರ್ಮಿಕರಿಗೆ ರಕ್ತದ ಶುಗರ್, ರಕ್ತ ಪರೀಕ್ಷೆಗಳು ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಜಗನಾಥ ಜಿ ಕೂಡಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಅಂಬರಾಯ ಕಟ್ಟಿಮನಿ, ಗ್ರಾಮ ಕಾಯಕ ಮಿತ್ರರ ತೇಜಸ್ವಿನಿ, ಐಇಸಿ ಸಂಯೋಜಕಿ ಶೋಭಾ ಕಣಮಸ್ಕರ್ ಗ್ರಾಮ ಪಂಚಾಯತಿ ಸಿಬ್ಬಂದಿ, , ಏಊPಖಿ ಸಿಬ್ಬಂದಿ ಅಣ್ಣಾರಾವ ಪೂಜಾರಿ, ಅಊಔ ರೋಜಲಿ, ನರ್ಸ್ ಗುಡಮ್ಮ,ಆಶಾ ಕಾರ್ಯಕರ್ತರು ಇತರರು ಹಾಜರಿದ್ದರು.

ಒಟ್ಟು 250 ಜನ ಕೂಲಿ ಕಾರ್ಮಿಕರಲ್ಲಿ 150 ಜನ ಮಹಿಳೆಯರು, 100 ಜನ ಪುರುಷರು
ಆರೋಗ್ಯ ಶಿಬಿರದಲ್ಲಿ ಭಾಗವಹಿಸಿದ್ದರು.