ಕಲಬುರಗಿ,ಜೂ:2 ಕಮಲಾಪುರ ತಾಲೂಕಿನ ಹೂಳಕುಂದ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಅಡಿಯಲ್ಲಿ ಬಸವೇಶ್ವರ ಕೆರೆಯ ಹೊಳೆತ್ತುವ ಕಾಮಗಾರಿಯಲ್ಲಿ ತೊಡಗಿದ್ದ 94 ಜನ ಕೂಲಿ ಕಾರ್ಮಿಕರಿಗೆ
ಸ್ಥಳದಲ್ಲಿ ಆರೋಗ್ಯ ಅಮೃತ ಅಭಿಯಾನದಡಿ ಅರೋಗ್ಯ ತಪಾಸಣೆ ನಡೆಸಲಾಯಿತು. ಅವರಿಗೆ ರಕ್ತದ ಒತ್ತಡ, ಶುಗರ್, ರಕ್ತ ಪರೀಕ್ಷೆ, ಕಣ್ಣಿನ ಪರೀಕ್ಷೆ ಹಲ್ಲು ಪರೀಕ್ಷೆ ಇನ್ನು ಮುಂತಾದ ಪರೀಕ್ಷೆಗಳನ್ನು ಏಕ ಕಾಲಕ್ಕೆ ಮಾಡಲಾಯಿತು ಸ್ಥಳದಲ್ಲಿ ಕಮಲಾಪುರ್ ತಾಲೂಕ ಪಂಚಾಯತಿಯ ಉದ್ಯೋಗ ಖಾತ್ರಿಯ ಪ್ರಭಾರಿ ಸಹಾಯಕ ನಿರ್ದೇಶಕ ಜಗನ್ನಾಥ್ ರೆಡ್ಡಿ, ಗ್ರಾಪಂ ಅಭಿವೃದ್ಧಿಯ ಅಧಿಕಾರಿ ಕೃಷ್ಣ,ಗ್ರಾಪಂ ಅಧ್ಯಕ್ಷೆ ಭೀಮಬಾಯ ಹನುಮಂತ್ರಾಯ ಮತ್ತು ಗ್ರಾಪಂ ಉಪಾಧ್ಯಕ್ಷ ಶಾಂತವೀರ ಮತ್ತು ಹೋರಾಟಗಾರರಾದ ಪ್ರಕಾಶ ಹಾಗೆ ಸದಸ್ಯರಾದ ಕಸ್ತೂರಿಬಾಯಿ ಗಣಪತಿ ಮತ್ತು ಡಿಒ ಶಶಿಕಾಂತ್ ಮತ್ತು .ಬಿ .ಎಫ್. ಟಿ ನಾಗರಾಜ ಹಾಗೆ ಬಿಲ ಕಲೆಕ್ಟರ. ಪಂಡಿತ. . ಸಿಬ್ಬಂದಿ ವರ್ಗದವರು. ಎಲ್ಲಾ ಅಧಿಕಾರಿಗಳು ಪ್ರೈಮರಿ ಹೆಲ್ತ್ ಕೋ ಆಡಿನೇಟರ್ ಆಸ್ಮಾ ಬೇಗಂ ಮತ್ತು ಹೆಲ್ತ್ ಇನ್ಸ್ಪೆಕ್ಟರ್ ಆಫೀಸರ್ ವೀರಭದ್ರ,ಸ್ವಯಂಸೇವಕರಾದ ಸವಿತಾ ಮತ್ತು ಆಶಾ ಕಾರ್ಯಕರ್ತೆ ಮಹಾದೇವಿ ಹಾಜರಿದ್ದರು.