ನರೇಗಾ ಕಾರ್ಮಿಕರ ಆರೋಗ್ಯ ತಪಾಸಣೆ

ಕಲಬುರಗಿ,ಜೂ:16.ಕಮಲಾಪುರ ತಾಲೂಕಿನ ಬಬಲಾದ (ಐಕೆ) ಗ್ರಾಮದಲ್ಲಿ ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ
ಕಾಮಗಾರಿ ಸ್ಥಳದಲ್ಲಿ ಆರೋಗ್ಯ ಅಮೃತ ಅಭಿಯಾನದಡಿ ಆರೋಗ್ಯ ತಪಾಸಣೆ ನಡೆಸಲಾಯಿತು. ಅವರಿಗೆ ರಕ್ತದ ಒತ್ತಡ, ಶುಗರ್, ರಕ್ತ ಪರೀಕ್ಷೆ, ಇನ್ನು ಮುಂತಾದ ಪರೀಕ್ಷೆಗಳನ್ನು ಏಕ ಕಾಲಕ್ಕೆ ಮಾಡಲಾಯಿತು. ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಅಶೋಕ,ಬಿಲ್ ಕಲೆಕ್ಟರ್ ಜಗದೀಶ, ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗದವರು,ಎಲ್ಲಾ ಅಧಿಕಾರಿಗಳು, ಕೆಎಚ್‍ಪಿಟಿ ತಾಲೂಕ ಸಂಯೋಜಕ ಉಮೇಶ್ ಜಾಧವ. ಮತ್ತು ಕಮ್ಯುನಿಟಿ ಹೆಲ್ತ್ ಆಫೀಸರ್ ಮಮ್ಮದ್ ಮುಜಬ, ಪರ್ವೀನ ಬೇಗಮ,ಸ್ವಯಂಸೇವಕರಾದ ರತ್ನಮ್ಮ.ಹಾಗೂ ಆಶಾ ಕಾರ್ಯಕರ್ತರಾದ. ಕಾವೇರಿ,ಸುನೀತಾ,ಸೌರಭಾಯ ಹಾಜರಿದ್ದರು..