ನರೇಗಾ ಕಾರ್ಮಿಕರೊಂದಿಗೆ ಸೇರಿ ಸಸಿನೆಟ್ಟು ಶ್ರಮದಾನ ಮಾಡಿದ  ಶಾಸಕ ಡಾ ಶ್ರೀನಿವಾಸ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ 11 :- ಗ್ರಾಮೀಣ ಪ್ರದೇಶದ ಜನರು ಬೇರೆ ಕಡೆ ಗುಳೇ ಹೋಗದಂತೆ ನರೇಗಾ ಯೋಜನೆ ಉಪಯುಕ್ತವಾಗಿದ್ದು ಇಂದು ಬೆಳಿಗ್ಗೆ ಗೆದ್ದಲಗಟ್ಟೆ ಗ್ರಾಮದ ಅಮೃತಕೆರೆ ಏರಿಯಾ ಮೇಲೆ ನಡೆಯುತ್ತಿದ್ದ ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ತೊಡಗಿದ್ದ ಕೂಲಿ ಕಾರ್ಮಿಕರೊಂದಿಗೆ ಸೇರಿ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಎನ್ ಟಿ ತಾವೇ ಶ್ರಮದಾನ ಮಾಡುವ ಮೂಲಕ ಸಸಿ ನೆಟ್ಟು ನಿರುಣಿಸಿದರು.
ಇದೇ ಸಂದರ್ಭದಲ್ಲಿ  ಶಾಸಕ ಡಾ. ಶ್ರೀನಿವಾಸ  ಎನ್. ಟಿ  ಮಾತನಾಡಿ  ಗ್ರಾಮೀಣ ಭಾಗದ ಬಡವರಿಗೆ ನರೇಗಾ ಯೋಜನೆ ಉತ್ತಮವಾಗಿದ್ದು ಬಡಜನತೆಗೆ ಆಸರೆಯಾಗಿದೆ ಅಲ್ಲದೆ ದಿನನಿತ್ಯದ ಶ್ರಮದಾನದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೆದ್ದಲಗಟ್ಟೆ ಗ್ರಾಮದ ನರೇಗಾ ಕೆಲಸದಲ್ಲಿ ತೊಡಗಿದ್ದ ಕೂಲಿಕಾರ್ಮಿಕ  ಮಹಿಳೆಯರು ಹಾಗೂ ಪುರುಷರು  ಇತರರು ಭಾಗವಹಿಸಿದ್ದರು.