ನರೇಗಾ ಕಾರ್ಮಿಕರಿಗೆ ಮತದಾನ ಜಾಗೃತಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮೇ,4- ತಾಲೂಕಿನ  ಹಲಕುಂದಿ ಗ್ರಾಮ ಪಂಚಾಯಿತಿಯಲ್ಲಿ ಇಂದು  ಚುನಾವಣಾ ಜಾಗೃತಿ ಅಭಿಯಾನದಡಿ ಮನರೇಗ ಕೂಲಿಕಾರರಿಗೆ ಮೇ 7ರಂದು ನಡೆಯುವ  ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಮತದಾನ (ಮಾಡಲು  ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಸ್ವೀಪ್ ಸಮಿತಿ ಅಧ್ಯಕ್ಷ  ರಾಹುಲ್ ಶರಣಪ್ಪ ಸಂಕನೂರು,  ತಾಲೂಕು  ಕಾರ್ಯನಿರ್ವಾಹಕ ಅಧಿಕಾರಿ,  ಸ್ಥಳೀಯ  ಪಂಚಾಯತಿ ಅಭಿವೃದ್ಧಿ ಅಧಿಕಾರಿ,  ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಒಕ್ಕೂಟದ ಸದಸ್ಯರು ತಾಲೂಕ್ ಪಂಚಾಯ್ತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಿ ಎಫ್ ಟಿ ನರೇಗಾ ಅಧಿಕಾರಿಗಳು ಹಾಗೂ ಹಲಕುಂದಿ ಮತ್ತು ಸಂಜಿರಾಯನಕೋಟೆ ಗ್ರಾಮ ಪಂಚಾಯತಿಯ ನರೇಗಾ ಕೂಲಿಕಾರರು ಭಾಗವಹಿಸಿದ್ದರು