ನರೇಗಾ ಕಾಯಕ ಸ್ಥಳದಲ್ಲಿ ಕೂಲಿಕಾರರಿಂದ ಸನ್ಮಾನ

ರೋಣ, ಮೇ25 : 32 ದಿನ ಸತತವಾಗಿ ನರೇಗಾ ಯೋಜನೆಯಡಿ ಬದು ನಿರ್ಮಾಣದ ಕೆಲಸ ನೀಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಖುಷಿಯಿಂದ ಸನ್ಮಾನ ಮಾಡುವ ಮೂಲಕ ನರೇಗಾ ಕೂಲಿಕಾರರು ಅಭಿನಂದನೆ ಸಲ್ಲಿಸಿದ್ದಾರೆ.
ರೋಣ ತಾಲೂಕಿನ ಕುರಡಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಯರೇಬೇಲೇರಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಸನ್ಮಾನ ಕಾರ್ಯಕ್ರಮ ನಡೆದಿದ್ದು ಕುರುಡಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿಲ್ಪಾ ಕವಲೂರ ಅವರಿಗೆ ಕೂಲಿ ಕಾರ್ಮಿಕರು ಸೇರಿದಂತೆ ಮೇಟ್ಸ್ ಗಳು ಗ್ರಾಮದ ಜಮೀನಿನಲ್ಲಿ ಸನ್ಮಾನ ಮಾಡುವ ಮೂಲಕ ಅಭಿಮಾನ ವ್ಯಕ್ತ ಪಡಿಸಿದ್ದಾರೆ..
ಕುರುಡಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಯರೇಬೇಲೇರಿ ಗ್ರಾಮದಲ್ಲಿ ನರೇಗಾ ಯೋಜನೆಯು ಬಂದಾಗಿನಿಂದ ಇಲ್ಲಿಯವರೆಗೂ ಈ ಗ್ರಾಮದಲ್ಲಿ ಇಷ್ಟು ಗರಿಷ್ಠ ಪ್ರಮಾಣದಲ್ಲಿ ಕೂಲಿ ಕೆಲಸ ಯಾರು ಕೊಟ್ಟಿದಿಲ್ಲಾ, ಹೊಸದಾಗಿ ಪಿಡಿಓ ಆಗಿ ಬಂದ ಶಿಲ್ಪಾ ಕವಲೂರ ಇಷ್ಟು ಪ್ರಮಾಣದಲ್ಲಿ ಕೆಲಸ ಕೊಟ್ಟು ನಮಗೆ ಆರ್ಥಿಕವಾಗಿ ಸದೃಢ ಆಗುವ ಹಾಗೆ ಮಾಡಿದ್ದಾರೆ ಅಂತಾರೆ ಗ್ರಾಮಸ್ಥರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಃಈಖಿ ಪ್ರಕಾಶ ಅಂಬಕ್ಕಿ, ಗ್ರಾಮ ಕಾಯಕ ಮಿತ್ರರು, ಪಂಚಾಯತ ಸಿಬ್ಬಂದಿಗಳು ಸೇರಿದಂತೆ ಕೂಲಿ ಕಾರ್ಮಿಕರು ಹಾಜರಿದ್ದರು..