ನರೇಗಾ ಕಾಮಗಾರಿ ಹೆಸರಲ್ಲಿ ಹಣ ದುರ್ಬಳಕೆ

ಗಬ್ಬೂರು,ಜ.೧೦- ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಯ ಮಲದಕಲ್ ಗ್ರಾಮ ಪಂಚಾಯತಿ ಕಂಪ್ಯೂಟರ್ ಆಪರೇಟರ್ ಸೋಕಿಲಾಲ ನಬಿಚಾಂದ್ ನರೇಗಾ ಹೆಸರಿನಲ್ಲಿ ಹಣ ಹೊಡೆದಿದ್ದಾನೆ ಎಂದು ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಹನುಮಂತರವರು ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.
ನರೇಗಾ ಯೋಜನೆಯಡಿ ಪಲಾನುಭವಿಗಳಿಗೆ ಸಾಮಗ್ರಿ ವೆಚ್ಚದ ಬಿಓಸಿ ಹಣವನ್ನು ಮಾರುತಿ ಟ್ರೇಡರ್ಸ್ ಮಾಲೀಕನಾದ ಸಿದ್ಧಲಿಂಗಪ್ಪನವರಿಂದ ನಗದು ಹಣವನ್ನು ಪಡೆದುಕೊಂಡು ನಾನೇ ಹಂಚಿಕೆ ಮಾಡುತ್ತೇನೆ ಎಂದು ದಾಷ್ಟತೆ ತೋರಿದ ಕಂಪ್ಯೂಟರ್ ಆಪರೇಟರ್ ನಬಿಚಾಂದ್ ಹಣವನ್ನು ತೆಗೆದುಕೊಂಡು, ಪ್ರತಿಯೊಬ್ಬ ಪಲಾನುಭವಿಗಳಿಗೆ ಬಿಡುಗಡೆಯಾದ ಮೊತ್ತ ದುರಗಪ್ಪ ತಂದೆ ಮಾರೇಪ್ಪ ೨೪,೪೫೦ ರೂ.ಹನುಮಂತ ತಂದೆ ಬಸವರಾಜ ೨೭,೧೨೫, ರೂ. ಶಾರದಮ್ಮ ಗಂಡ ೨೬,೬೫೦,ರೂ.ಭೀಮವ್ವ ಗಂಡ ಹನುಮಂತು ೨೪,೨೭೫ ರೂ. ಈ ನಾಲ್ಕು ಜನ ಫಲಾನುಭವಿಗಳಿಗೆ ಕೇವಲ ೧೫,೦೦೦ ರಿಂದ ೧೬,೦೦೦ ರೂಪಾಯಿಗಳು ಮಾತ್ರ ಕೊಟ್ಟಿದ್ದಾರೆ.
ಈ ಭ್ರಷ್ಟಾಚಾರದಲ್ಲಿ ತೊಡಗಿದ ಸೋಕಿಲಾಲ ಕಂಪ್ಯೂಟರ್ ಆಪರೇಟರ್ ನಬಿಚಾಂದ್ ಮೇಲೆ ಸೂಕ್ತ ಕ್ರಮಕೈಗೊಂಡು ಅವರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕೆಂದು ದೂರು ಮೂಲಕ ಮಲದಕಲ್ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಹನುಮಂತ ಎನ್.ಗಣೇಕಲ್ ಅವರು ಜಿಲ್ಲಾ ಪಂಚಾಯತ್ ಸಿಇಒಗೆ ಒತ್ತಾಯಿಸಿದರು.