ನರೇಗಾ ಕಾಮಗಾರಿ ಸ್ಥಳದಲ್ಲಿ ಉಚಿತ ಗ್ರಾಮ ಆರೋಗ್ಯ ತಪಾಸಣಾ ಶಿಬಿರ

ಮಂಡ್ಯ.ಮೇ.25:- ನರೇಗಾ ಕೂಲಿಕಾರರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಕಡೆಗೆ ಗಮನಹರಿಸಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಲಿಂಗಯ್ಯ ಅವರು ತಿಳಿಸಿದರು.
ಆರೋಗ್ಯ ಇಲಾಖೆ – ಕೆ.ಹೆಚ್.ಪಿ.ಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನರೇಗಾ ಕೂಲಿಕಾರರು ಯಾವುದೇ ವಿಧವಾದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ನಿರ್ಲಕ್ಷ್ಯ ಮಾಡದೇ ಗ್ರಾಮ ಆರೋಗ್ಯ ಅಭಿಯಾನದ ಮೂಲಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಹಾಗೂ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಕೂಲಿಕಾರರಿಗೆ ಕೆಲಸ ಕೊಡುವುದ?É?ಟೀ ಅಲ್ಲದೇ, ಕೂಲಿಕಾರರ ಆರೋಗ್ಯವನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಗ್ರಾಮ ಆರೋಗ್ಯ ಶಿಬಿರವನ್ನು ಆಯೋಜಿಸಲಾಗದೆ. ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ತಮ್ಮ ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿಶ್ವೇಶ್ವರಯ್ಯ ಎರಡನೇ ಪಿಕಾಫ್ ನಾಲೆಯಲ್ಲಿ ಹೂಳು ತೆಗೆಯುತ್ತಿರುವ ಪ್ರತಿಯೊಬ್ಬ ಕೂಲಿಕಾರರಿಗೆ ಬಿಪಿ, ಸಕ್ಕರೆ ಕಾಯಿಲೆ, ಹೀಮೋಗ್ಲೋಬಿನ್, ಕ್ಷಯರೋಗ ಇನ್ನಿತರ ಸಣ್ಣಪುಟ್ಟ ಕಾಯಿಲೆಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದರು.
ಸಹಾಯಕ ನಿರ್ದೇಶಕರಾದ ದೀಪು ಮಾತನಾಡಿ, ಬೇಸಿಗೆಯ ಕಾಲವಾಗಿರುವ ಕಾರಣ, ಕಾರ್ಮಿಕರ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಬೇಕಾಗಿದೆ. ಕೂಲಿಕಾರ್ಮಿಕರು ತೆಗೆದುಕೊಳ್ಳುವ ಊಟ, ಅವರ ಜೀವನ ಶೈಲಿಯೂ ಮುಖ್ಯವಾಗಿದೆ ಮತ್ತು ವಿಶ್ವೇಶ್ವರಯ್ಯ ಎರಡನೇ ಪಿಕಪ್ ನಾಲೆ ಪಕ್ಕದಲ್ಲಿ ನರೇಗಾ ಕೂಲಿಕಾರರಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಪಾಸಣೆ ಮಾಡಿಸಿಕೊಳ್ಳುತ್ತಿರುವ ಕೂಲಿಕಾರರು ಕೂಡಾ ಅವರ ಆರೋಗ್ಯದ ಮೇಲೆ ಗಮನಕೊಡಿ ಎಂದರು.
ಇದೇ ವೇಳೆ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಲಿಂಗಯ್ಯ ರವರು ಮತ್ತು ಸಹಾಯಕ ನಿರ್ದೇಶಕರಾದ ದೀಪು ರವರು ಸಹ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಕೂಲಿಕಾರರಿಗೆ ಆತ್ಮ ಸ್ಥೈರ್ಯ ತುಂಬಿದರು.
ಇದೇ ಸಂದರ್ಭದಲ್ಲಿ ಪಿಡಿಒ ಸಂತೋ?ï, ತಾಲ್ಲೂಕು ಐಇಸಿ ಸಂಯೋಜಕರಾದ ಸುನಿಲ್ ಕುಮಾರ್ ಹೆಚ್, ತಾಲ್ಲೂಕು ಕೆ.ಹೆಚ್.ಪಿ.ಟಿ ಸಂಯೋಜಕರಾದ ಸಚಿನ್, ಸಿಹೆಚ್‍ಓ ನಿಧಿ ಆಶಾ ಕಾರ್ಯಕರ್ತೆ, ಕೂಲಿಕಾರರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.