ನರೇಗಾ ಕಾಮಗಾರಿ ಸ್ಥಳಕ್ಕೆ ಜಿ.ಪಂ ಯೋಜನಾಧಿಕಾರಿ ಭೇಟಿ-ಪರಿಶೀಲನೆ

ರಾಯಚೂರು,ಏ.೨೭-೨೦೨೦೧-೨೧ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಅನುಷ್ಠಾನಗೊಂಡಿರುವ ಸಾಮಗ್ರಿಗಳ ಆಧಾರಿತ ಕಾಮಗಾರಿಗಳು ನಡೆಯುತ್ತಿರುವ ತಾಲೂಕಿನ ಬಿಚ್ಚಾಳಿ ಗ್ರಾಮಕ್ಕೆ ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಡಾ.ಟಿ.ರೋಣಿ ಭೇಟಿ ನೀಡಿ ಪರಿಶೀಲಿಸಿದರು.
ನರೇಗಾ ಯೋಜನೆಯಡಿ ಶಾಲಾ ಅಡುಗೆ ಕೋಣೆ, ಗೋಧಾಮ್, ಅಂಗನವಾಡಿ ಕಟ್ಟಡ ಸೇರಿದಂತೆ ಇತರೆ ಕಾಮಗಾರಿಗಳನ್ನು ತಾಲೂಕಿನ ಬಿಚ್ಚಾಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೌತಿಕ ಸ್ಥಳ ಪರಿಶೀಲನೆ ಮಾಡಿ, ಈ ರೀತಿಯಲ್ಲಿ ಅನುಷ್ಠಾನಗೊಂಡಿರುವ ಗಾಮಾಭಿವೃದ್ದಿ ಕಲ್ಪನೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯನೆಯಿಂದ ತುಂಬಾ ಉತ್ತಮ ಕಾಮಗಾರಿಗಳನ್ನು ಅನುಷ್ಠಾನ ಮಾಡಿ ಕೂಲಿಕಾರರಿಗೆ ಕೆಲಸ ಮತ್ತು ಕೂಲಿ ಪಾವತಿ ಮಾಡುವುದರೊಂದಿಗೆ ಬಹು ಬಾಳಿಕೆ ಬರುವಂತಹ ಆಸ್ತಿಗಳ ಸೃಜನೆ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಕರು, ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕ ಇಂಜಿನಿಯರ್ ಮತ್ತು ಗ್ರಾಮ ಪಂಚಾಯತಿ ಡಿಇಒ ಇದ್ದರು.