ನರೇಗಾ ಕಾಮಗಾರಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಶಾಸಕ ರಹೀಂ ಖಾನ್

ಬೀದರ:ಜೂ.1: ಬೀದರ ಶಾಸಕರಾದ ರಹೀಂ ಖಾನ್ ಅವರು ಮೇ 31ರಂದು ಬೀದರ್ ತಾಲೂಕಿನಲ್ಲಿ ಪ್ರವಾಸ ಕೈಗೊಂಡರು.

ಈ ವೇಳೆಯಲ್ಲಿ ಇಮಾಮಬಾದ್ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿದ್ದ ನರೇಗಾ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದರು.

ನಿಮಗೆ ಕಾಲಕಾಲಕ್ಕೆ ಕೂಲಿ ಪಾವತಿಯಾಗುತ್ತಿದ್ದೇಯೆ? ಈ ಬಗ್ಗೆ ಏನಾದರು ತೊಂದರೆಯಿದ್ದಲ್ಲಿ ತಮ್ಮ ಗಮನಕ್ಕೆ ತರಬೇಕು ಎಂದು ಶಾಸಕರು ಅಲ್ಲಿನ ಕೆಲಸಗಾರರೊಂದಿಗೆ ಮಾತನಾಡಿ, ಅವರ ಅಹವಾಲನ್ನು ಆಲಿಸಿದರು.

ಈಗ ಜಿಲ್ಲಾದ್ಯಂತ ಕೋವಿಡ್ ಲಸೀಕಾಕರಣ ನಡೆಯುತ್ತಿದೆ. ಫ್ರಂಟಲೈನ್ ವರ್ಕರ್ಸ್ ಮತ್ತು ದುರ್ಬಲ ಗುಂಪಿನವರಿಗೆ ಲಸಿಕೆ ನೀಡಲಾಗುತ್ತಿದೆ. ತಮ್ಮನ್ನು ಕೂಡ ದುರ್ಬಲ ಗುಂಪಿನ ಫಲಾನುಭವಿಗಳೆಂದು ಪರಿಗಣಿಸಿ ಲಸಿಕೆ ನೀಡುವುದಕ್ಕೆ ಸಂಬಂಧಿಸಿದಂತೆ ತಾವು ಪ್ರಸ್ತಾವನೆ ಸಲ್ಲಿಸುವುದಾಗಿ ಶಾಸಕರು ಇದೆ ವೇಳೆ ನರೇಗಾ ಕೆಲಸಗಾರರಿಗೆ ಭರವಸೆ ನೀಡಿದರು.

ಈ ಸಂದರ್ದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇತರರು ಹಾಜರಿದ್ದರು.

ರಸೂಲಾಬಾದ್, ಅಲ್ಮಾಸ್‍ಪುರ ಗ್ರಾಮಕ್ಕೆ ಭೇಟಿ: ಶಾಸಕರಾದ ರಹೀಂ ಖಾನ್ ಅವರು ಮೇ 31ರಂದು ರಸೂಲಾಬಾದ್ ಮತ್ತು ಅಲ್ಮಾಸಪುರ ಗ್ರಾಮಗಳಿಗೂ ಕೂಡ ಭೇಟಿ ನೀಡಿ ಅಲ್ಲಿ ನಡೆಯುತ್ತಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಅರ್ಹ ಗುಂಪಿನ ಎಲ್ಲರೂ ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು ಎಂದು ಇದೆ ವೇಳೆ ಮನವಿ ಮಾಡಿದರು.

ಬಾಕಿ ಉಳಿದಿರುವ ಎಲ್ಲಾ ಕಾರ್ಯಗಳನ್ನು ನಿರ್ದಿಷ್ಟ ಸಮಯದೊಳಗೆ ಪೂರ್ಣಗೊಳಿಸಬೇಕು ಎಂದು ಶಾಸಕರು ಇದೆ ವೇಳೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.