ನರೇಗಾ ಕಾಮಗಾರಿ : ನೆಲಜೇರಿ ಸ್ಥಳದಲ್ಲಿ ಆರೋಗ್ಯ ತಪಾಸಣೆ 


ಸಂಜೆವಾಣಿ ವಾರ್ತೆ
ಕುಕನೂರ: ತಾಲೂಕಿನ ನೆಲಜೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನೆಲಜೇರಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಇಂದು ಆರೋಗ್ಯ ತಪಾಸಣಾ ಶಿಭಿರವನ್ನು ಮತ್ತು ರೋಜಗಾರ ದಿನಾಚರಣೆ ಕಾರ್ಯಕ್ರಮ ಹ ಮ್ಮಿ ಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ  ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಮಾತನಾಡಿ, ನರೇಗಾ ಕೂಲಿಕಾರರು ಬಹಳಷ್ಟು ಶ್ರಮದಿಂದ ಪ್ರತಿದಿನ ಕೆಲಸ ಮಾಡುತ್ತಿರುತ್ತಾರೆ. ಅಂತ ಕೆಲಸ ಮಾಡುವ ಕೂಲಿಕಾರರು ಆರೋಗ್ಯ ತಪಾಸಣೆಗಾಗಿ ಆರೋಗ್ಯ ಕೇಂದ್ರಗಳಿಗೆ ಹೊಗುವ ಬದಲಾಗಿ ಕಾಮಗಾರಿ ಸ್ಥಳದಲ್ಲಿಯೇ ಆರೋಗ್ಯ ಇಲಾಖೆ ಮತ್ತು KHPT ತಾಂತ್ರಿಕ ಸಹಾಯದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮುಖ್ಯವಾಗಿ ಸಕ್ಕರೆ ಖಾಯಿಲೆ, ಬೆ.ಪಿ. ಟಿಬಿ ಸೇರಿದಂತೆ ಎಲ್ಲಾ ಸಣ್ಣ ಸಣ್ಣ ಆರೋಗ್ಯ ಸಂಬಂಧಿ ಖಾಯಿಲೆಗಳಿಗೆ ಸ್ಥಳದಲ್ಲಿ ಚಿಕಿತ್ಸೆ  ಮಾಡಲಾಗುತ್ತಿದೆ‌. ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ನಂತರ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜುಲೈ-1 ರಿಂದ ಆಧಾರ ಲಿಂಕ್ ಆದ ಕೂಲಿಕಾರರುಗರ ಬಾಂಕ್ ಖಾತೆಗಳ ಮಾತ್ರ ಕೂಲಿ ಸರಿಯಾಗಿ ಪಾವತಿಯಾಗುತ್ತದೆ ಅದಕ್ಕಾಗಿ ಎಲ್ಲರೂ ಆಧಾರ ಸಂಖ್ಯೆಯನ್ನು ಬ್ಯಾಂಕ್ ಖಾತೆಗಳಿಗೆ ಹೊಂದಾಣಿಕೆ ಮಾಡಿ ABPS ಮಾಡಿಸಿಕೊಳ್ಳಲು ಕರೆ ನೀಡಿದರು.
ವಿಶೇಷತೆ:ಕಾಮಗಾರಿ ಸ್ಥಳದಲ್ಲಿ 1100 ಕೂಲಿಕಾರರು ಆರೋಗ್ಯ ತಪಾಸಣೆ ಮಾಡಿಸಲಾಯಿತು
ಸ್ಥಳದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ನೀಲಂ ಚಳಗೇರಿ, ಆರೋಗ್ಯ ಅಧಿಕಾರಿಗಳಾದ ಈಶ್ವರ್ ರಾಠೋಡ, ಮಂಗಳಾ ಬಸವೇಶ್ವರ ಜತ್ತಿ, ಕೆ.ಎಚ್.ಪಿ.ಟಿ ಸಂಯೋಜಕ ರಫಿ, ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಆಶಾ ಕಾರ್ಯಕರ್ತೆಯರು, ಗ್ರಾಮ ಕಾಯಕ ಮಿತ್ರರು, ಕಾಯಕ ಬಂಧುಗಳು ಕೂಲಿಕಾರರು ಹಾಜರಿದ್ದರು.