ನರೇಗಾ, ಎಸ್ ಬಿಎಂ ಕಾಮಗಾರಿಗಳ ವೀಕ್ಷಣೆ ಮಾಡಿದ ಜಿಪಂ ಸಿಇಓ


ಸಂಜೆವಾಣಿ ವಾರ್ತೆ
ಗಂಗಾವತಿ, ಜೂ.02 : ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯ ನರೇಗಾ ಹಾಗೂ ಎಸ್ ಬಿಎಂ ಯೋಜನೆ ಕಾಮಗಾರಿಗಳನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಭೇಟಿ ನೀಡಿ ವೀಕ್ಷಣೆ ಮಾಡಿದರು.
ಆನೆಗೊಂದಿ ಗ್ರಾಪಂ ವ್ಯಾಪ್ತಿಯ ಬಸವನ ದುರ್ಗಾ ಗ್ರಾಮದ ಡುಮ್ಕಿ ಕೊಳಕ್ಕೆ ಜಿ.ಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರು ಭೇಟಿ ನೀಡಿ, ‘ಒಂದು ಎಕರೆ ವಿಸ್ತೀರ್ಣ ಇರುವ ಡುಮ್ಕಿ ಕೊಳವನ್ನು ಉದ್ಯೋಗ ಖಾತರಿ ಯೋಜನೆಯಡಿ ಅಭಿವೃದ್ಧಿ ಪಡಿಸಿ ಕೆರೆಯನ್ನಾಗಿ ಮಾಡಬೇಕು. ನರೇಗಾ ಸೇರಿ ವಿವಿಧ ಯೋಜನೆಗಳ ಅನುದಾನ ಬಳಸಿ ಅಭಿವೃದ್ಧಿಗೆ ಮುಂದಾಗಬೇಕು. ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಉಂಟಾದರೆ ಕೆರೆ ನೀರು ಬಳಸಬಹುದು. ಅಂತರ್ಜಲ ವೃದ್ಧಿಗೆ ನೆರವಾಗಲಿದೆ’ ಎಂದರು.
ಇದಕ್ಕೂ ಮುನ್ನ ಸಂಗಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಆಸ್ಪತ್ರೆ ಆವರಣದಲ್ಲಿ ನರೇಗಾದಡಿ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಚರ್ಚಿಸಿದರು. ನಂತರ
ದಾಖಲೆ ಪರಿಶೀಲನೆ ನಡೆಸಿದರು. ಈ ವೇಳೆ ವೈದ್ಯಾಧಿಕಾರಿ ಡಾ.ಸಂತೋಷ ಕುಮಾರ ಇದ್ದರು.
ಎಸ್ ಡಬ್ಲ್ಯುಎಂ ಕಾಮಗಾರಿ ವೀಕ್ಷಣೆ :ಸಣಾಪುರ ಗ್ರಾಪಂ ವ್ಯಾಪ್ತಿಯ ತಿರುಮಲಾಪುರ ಗ್ರಾಮದಲ್ಲಿ ಎಲ್ ಡಬ್ಲ್ಯುಎಂ (ಬೂದು ನೀರು ನಿರ್ವಹಣಾ ಘಟಕ)ವನ್ನು ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರು ವೀಕ್ಷಣೆ ಮಾಡಿ  ವ್ಯಕ್ತಪಡಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ನಾಗೇಶ ಕುರಡಿ, ಕೃಷ್ಣಪ್ಪ, ಬಸವರಾಜಗೌಡ್ರ, ಎಸ್ ಬಿಎಂ  ಜಿಲ್ಲಾ ಸಮಾಲೋಚಕರಾದ ಮಾರುತಿ ನಾಯ್ಕ್ , ನರೇಗಾ ತಾಂತ್ರಿಕ ಸಂಯೋಜಕರಾದ ಬಸವರಾಜ ಜಟಗಿ, ಎಸ್ ಬಿಎಂ ವಿಷಯ ನಿರ್ವಾಹಕರಾದ ಭೀಮಣ್ಣ ನಾಯಕ, ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಟಿಎಇಗಳಾದ ವಿಜಯ ಶಿರಿಗೇರಿ, ಯೋಗೇಶ ಹಾಗೂ ಗ್ರಾಪಂ ಸದಸ್ಯರು, ಗ್ರಾಪಂ ಕಾರ್ಯದರ್ಶಿಗಳು, ಸಿಬ್ಬಂದಿಗಳು ಇದ್ದರು.