ನರೇಗಾದಡಿ  100 ದಿನ ಕೂಲಿ ನೀಡಲು ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.23:  ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆಯಿಂದ  ಇಂದು ಕುರುಗೋಡು ತಾಲೂಕು  ಕಲ್ಲುಕಂಬ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳ ರೈತರಿಗೆ 100 ದಿನ  ನರೇಗಾ ಕೆಲಸ ವಿತರಿಸಲು ಆಗ್ರಹಿಸಿ ಪಿ.ಡಿ.ಓ ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ  ಅಧ್ಯಕ್ಷ ಗೋವಿಂದ್ ಮಾತನಾಡಿ,
ಇಂದು ಈ ಯೋಜನೆಯಡಿ ಹಳ್ಳಿಯ ಜನಗಳಿಗೆ ಸುಗಮವಾಗಿ ಕೆಲಸ ನೀಡಿ, ಕೆಲಸದ ಕೂಲಿಯನ್ನು ಯಾವುದೇ ಸಮಸ್ಯೆ ಇಲ್ಲದೆ ಪೂರ್ಣ ಹಣವನ್ನು ಅವರಿಗೆ ತಲುಪಿಸಬೇಕಿತ್ತು, ಆದರೆ ಇಂದು ಈ ಕೆಲಸ ಮಾಡುವ ರೈತರಿಗೆ ನಿರಂತರವಾಗಿ ಕೆಲಸ ನೀಡದಿರುವುದು, ಸಂಪೂರ್ವವಾದ ಕೂಲಿಯನ್ನು ನೀಡದಿರುವುದು  ಸೇರಿ ಅನೇಕ ಸಮಸ್ಯೆಗಳು ಈ ರೈತರನ್ನು ಕಾಡುತ್ತಿವೆ. ಈ ರೀತಿಯ ಸಮಸ್ಯೆಗಳು ನಿರ್ಮಾಣವಾದರೆ ಸರ್ಕಾರ ಯಾವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಯಿತೋ ಆ ಉದ್ದೇಶ ಈಡೇರದೇ ಹೋಗಬಹುದು. ಆದ್ದರಿಂದ ಅಧಿಕಾರಿಗಳು ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ತ್ವರಿತವಾಗಿ ಈ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು , ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಅನಿವಾರ್ಯ ಎಂದರು.
ರೈತ ಮುಖಂಡ ಪಂಪಾಪತಿ, ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ರೈತರಾದ ಮನೋಹರ ರೆಡ್ಡಿ, ಮುತ್ತಣ್ಣ, ಅದೆಪ್ಪ, ಸುರೇಶ್ , ಬಸವರಾಜ, ಎನ್ ಬಸವರಾಜ, ಬಿ.ಎಂ ಸಣ್ಣ ದೊಡ್ಡಪ್ಪ, ಎನ್.ತಿಪ್ಪಣ್ಣ ಎ. ಹನುಮೇಶ್ ಸೇರಿದಂತೆ ಇನ್ನಿತರರು ಇದ್ದರು.

One attachment • Scanned by Gmail