ನರೇಗಾದಡಿ ೧೦೦ ದಿನ ಪೂರೈಸಿದ ಕೂಲಿಕಾರ್ಮಿಕ ಕುಟುಂಬಕ್ಕೆ ಸನ್ಮಾನ

ಲಿಂಗಸಗೂರು.ಜು.೨೦- ತಾಲೂಕಿನ ಗುಂತಗೋಳ ಗ್ರಾಮ ಪಂಚಾಯತಿಯಲ್ಲಿ ಯರಗೋಡಿ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ವರ್ಷ ೨೦೨೧-೨೨ನೆ ಸಾಲಿನಲ್ಲಿ ೧೦೦ ದಿನಗಳು ಪೂರೈಸಿದ ಕೂಲಿಕಾರರ ೧೧೮ ಕುಟುಂಬದವರಿಗೆ ಶರ್ಟ್ ಮತ್ತು ಕ್ಯಾಪ್‌ಗಳನ್ನು ನೀಡಿ
ಸನ್ಮಾನಿಸಲಾಯಿತು.
ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕ ಪಂಚಾಯತ್ ಅಮರೇಶ ಯಾದವ ಮಾತನಾಡಿ ೧೦೦ ದಿನ ಪೂರೈಸಿದ ಕೂಲಿಕಾರರಿಗೆ ಶರ್ಟ್ ಮತ್ತು ನರೇಗಾ ಕ್ಯಾಪ್ ವಿತರಿಸಿ ಅದೇ ರೀತಿ ಆರ್‌ಬಿಆರ್‌ಕೆ ಕಾರ್ಡ್‌ನಿಂದ ಒಂದು ಕುಟುಂಬಕ್ಕೆ ೫ ಲಕ್ಷ ವೈದ್ಯಕೀಯ ವೆಚ್ಚ ಹಾಗೂ ಇ -ಶ್ರಮ ಕಾರ್ಡ್‌ನಿಂದ ಅಕಾಲಿಕ ಮರಣ ಹೊಂದಿದರೆ ಪರಿಹಾರ ಸಿಗಲಿದೆ ಎಲ್ಲರೂ ಕಾರ್ಡ್ ಮಾಡಿಕೊಳ್ಳಲ್ಲೂ ತಿಳಿಸಿದರು.
ಸೋಮನಗೌಡ ಪಾಟೀಲ್ ಸಹಾಯಕ ನಿರ್ದೇಶಕರು (ಗ್ರಾ.ಉ) ರವರು ಮಾತನಾಡಿ ನರೇಗದಲ್ಲಿ ಪ್ರತಿಯೊಂದು ಕುಟುಂಬ ೧೦೦ ದಿನ ಪೂರೈಸಲಿ ಎಂದು ಕೂಲಿಕಾರರಿಗೆ ನರೇಗಾ ಸದುಪಯೋಗ ಪಡೆಯಲು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದ್ಯಸರು, ಪ್ರವೀಣ್ ಕುಮಾರ್ ಪಿಡಿಒ, ಬಾಲಪ್ಪ ತಾಲೂಕ ಐಇಸಿ ಸಂಯೋಜಕರು, ವೀರನಗೌಡ ತಾಂತ್ರಿಕ ಸಹಾಯಕರು ಡಿಇಒ ಗಂಗಾಧರ, ಕರವಸೂಲಿಗಾರ ಮೌನುದ್ದಿನ್, ಬಿಎಫ್‌ಟಿ ಮತ್ತು ಕೂಲಿಕಾರರು ಭಾಗವಹಿಸಿದ್ದರು.