ನರೇಗಾದಡಿ ಅಂಚೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಲು ಪರಿಶೀಲನೆ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಆ.೭; ಪ್ರಸ್ತುತ ಸಮಯದಲ್ಲೂ ಗ್ರಾಮೀಣ ಭಾಗದಲ್ಲಿ ಪೆÇೀಸ್ಟ್ ಮಾಸ್ಟರ್ ಮನೆಗಳಲ್ಲಿ ಅಂಚೆ ಕಚೇರಿಗಳ ನಿರ್ವಹಣೆ ಮಾಡುತ್ತಿರುವುದು ಆಶ್ಚರ್ಯ ಎನಿಸುತ್ತದೆ. ಈ ರೀತಿ ಆಗಬಾರದು. ಗ್ರಾಮೀಣ ಭಾಗದಲ್ಲಿ ನರೇಗಾದ ಅಡಿ ಅಂಚೆ ಕಚೇರಿ ಕಟ್ಟಡ ನಿರ್ಮಿಸಲು ಅವಕಾಶ ಇದ್ದರೇ, ಖಂಡಿತವಾಗಿ, ಆದ್ಯತೆ ಮೇರೆಗೆ ಅನುದಾನ ಮೀಸಲಿರಿಸಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಭರವಸೆ ನೀಡಿದರು.ಚಿತ್ರದುರ್ಗ ತಾಲ್ಲೂಕಿನ ಭರಮಸಾಗರದಲ್ಲಿ ಭಾರತೀಯ ಅಂಚೆ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಭರಮಸಾಗರ ಉಪ ಅಂಚೆ ಕಚೇರಿಯ ನೂತನ ಕಟ್ಟಡವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ಮೊಬೈಲ್, ಐಟಿ ತಂತ್ರಜ್ಞಾನ ಬೆಳೆದಂತೆ ಅಂಚೆ ಕಚೇರಿಗಳ ಕೆಲಸದಲ್ಲೂ ಹಲವಾರು ಬದಲಾವಣೆಗಳು ಉಂಟಾದವು. ಡಿಬಿಟಿ, ಡಿಜಿಟಲ್ ಪೇಮೆಂಟ್ ಶುರು ಆದ ಮೇಲೆ ಅಂಚೆ ಕಚೇರಿಗಳ ಅಸ್ತಿತ್ವಕ್ಕೆ ಧಕ್ಕೆಯಾಗುವ ಆತಂಕ ಎದುರಾಗಿತ್ತು. ಆದರೆ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿಯವರು ಅಂಚೆ ಕಚೇರಿ ಮುಚ್ಚಲು ಅವಕಾಶ ನೀಡದೆ, ಸರ್ಕಾರದ ಹಲವು ಯೋಜನೆ ಹಾಗೂ ಗ್ರಾಮೀಣ ಜನರಿಗೆ ಜೀವವಿಮಾ ಸೌಲಭ್ಯಗಳನ್ನು  ಜಾರಿ ಮಾಡಲು ಅಂಚೆ ಕಚೇರಿಗಳಿಗೆ  ಅವಕಾಶ ಕಲ್ಪಿಸಿದರು.  ಇಂದು ಬ್ಯಾಂಕ್ ಗಳೊಂದಿಗೆ ಪೈಪೆÇೀಟಿ ನೀಡಿ ಅಂಚೆ ಕಚೇರಿಗಳು ಡಿಜಿಟಲ್ ಪೇಮೆಂಟ್ ಸಹ ಮಾಡುತ್ತಿವೆ. ಪಲಾನುಭವಿಗಳಿಗೆ ಸರ್ಕಾರಿ ಸೌಲಭ್ಯದಡಿ ನೇರ ನಗದು ವರ್ಗಾವಣೆ ಸೇವೆಯನ್ನು ಸಹ ಅಂಚೆ ಕಚೇರಿಯಲ್ಲಿ ನೀಡಲಾಗುತ್ತಿದೆ. ನೇರ ನಗದು ವರ್ಗಾವಣೆ ಜಾರಿ ಮೂಲಕ ಯಾವುದೇ ಭ್ರμÁ್ಟಚಾರಕ್ಕೆ ಅವಕಾಶ ನೀಡದೇ ಫಲಾನುಭವಿಗಳಿಗೆ ನೇರವಾಗಿ ಸರ್ಕಾರದ ಯೋಜನೆ ತಲುಪಿಸಲಾಗುತ್ತಿದೆ ಎಂದರು.ಸರ್ಕಾರದ ಯೋಜನೆಗಳ ಮೇಲೆ ಅವಲಂಬಿತರಾದವರ ಮನೆ ಬಾಗಿಲಿಗೆ ಅಂಚೆ ಕಚೇರಿಗಳು ಸೇವೆಗಳನ್ನು ತಲುಪಿಸುತ್ತಿವೆ. ಅಂಚೆ ಇಲಾಖೆಯಲ್ಲಿ ಅನುಕಂಪ ಆಧಾರಿತ ನೌಕರಿಯನ್ನು ಕುಟುಂಬದ ಅವಲಂಬಿತರಾದವರಿಗೆ ನೀಡಲು ಶೇ.5 ರಷ್ಟರ ನಿಯಮ ತೊಡಕಾಗಿದೆ. ಅಂಚೇ ಕಚೇರಿಯಲ್ಲಿ ಸೇವೆ ಸಲ್ಲಿಸಿ ಮೃತರಾದ ಬಹಳಷ್ಟು ನೌಕರರ ಕುಟುಂಬದವರು ಅನುಕಂಪ ಆಧಾರಿತ ನೌಕರಿ ಕೊಡಿಸುವಂತೆ ಮನವಿ ಮಾಡುತ್ತಾರೆ. ಇದನ್ನು ಗಮನದಲ್ಲಿ ಇರಿಸಿಕೊಂಡು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ, ಈಗಿರುವ ಶೇ.5 ನಿಯಮಕ್ಕೆ ತಿದ್ದುಪಡಿ ತರಲು ಯತ್ನಿಸಲಾಗುವುದು ಎಂದರು.ಕರ್ನಾಟಕ ವೃತ್ತದ ಚೀಫ್ ಪೆÇೀಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ಮಾತನಾಡಿ, ಅಂಚೆ ಕಚೇರಿಯು ಗ್ರಾಮೀಣ ಭಾಗದಲ್ಲಿ ಉಳಿತಾಯ ಹಾಗೂ ವಿಮೆ ಸೌಲಭ್ಯ ನೀಡುತ್ತಿದೆ. ಅಂಚೆ ಕಚೇರಿಯ ಉಳಿತಾಯ ಖಾತೆಗಳು ಬ್ಯಾಂಕ್ ಖಾತೆಗಳೊಂದಿಗೆ ಸಮ್ಮಿಳಿತಗೊಳ್ಳಲಿದ್ದು, ಬ್ಯಾಂಕ್ ಖಾತೆಗಳಂತೆ, ಅಂಚೆ ಖಾತೆಗಳ ಮೂಲಕ ಹಣಕಾಸು ವ್ಯವಹಾರ ನಡೆಸಬಹುದು. ಸರ್ಕಾರದ ಯೋಜನೆಗಳ ಫನಾಲುಭವಿಗಳಿಗೆ ಅಂಚೆ ಖಾತೆಗಳಿಗೆ ನೇರವಾಗಿ ನಗದು ವರ್ಗಾವಣೆ ಮಾಡಬಹುದಾಗಿದೆ. ಡಿಜಿಟಲ್ ಪಾವತಿಯು ಸಹ ಅಂಚೆ ಖಾತೆ ಮೂಲಕ ಸಾಧ್ಯವಾಗಲಿದೆ. ಅಂಚೆ ಕಚೇರಿಗಳಲ್ಲಿ ಆಧಾರ್ ಸೇವೆಗಳು ಹಾಗೂ ಪಾಸ್ ಪೆÇೀರ್ಟ್ ಸೇವಾ ಕೇಂದ್ರಗಳನ್ನು ತೆರೆದು ನಾಗರಿಕರಿಗೆ ಸೇವೆ ನೀಡಲಾಗುತ್ತಿದೆ ಎಂದರು.