ನರೇಗಾದಡಿಯ ಅಕ್ರಮ ಕಾಮಗಾರಿಗಳು ಸ್ಥಗಿತಗೊಳಿಸಿ-ಭಾಸ್ಕರಪ್ಪ

ಕೋಲಾರ,ನ.೨೮:ತೊಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಟ್ನಹಳ್ಳಿ, ದಿನ್ನೂರು, ಕಾಕಿನತ್ತ, ಕಿತ್ತಂಡೂರು, ಕೆಂಬತ್ತನಹಳ್ಳಿ, ಅಗ್ರಹಾರ ಶೆಟ್ಟಿಕುಂಟೆ ಈ ಎಲ್ಲಾ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ನಡೆದಿರುವ ಅಕ್ರಮ ಕಾಮಗಾರಿಗಳು ಸ್ಥಗಿತಗೊಳಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಕೂಲಿ ಹಣ(ಎನ್.ಆರ್) ಹಣ ಪಾವತಿ ಮಾಡಬಾರದು ಎಂದು ತೊಟ್ಲಿ ಗ್ರಾಮದ ಭಾಸ್ಕರಪ್ಪ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ತಾಲೂಕಿನ ತೊಟ್ಟಿ ಗ್ರಾಮ ಪಂಚಾಯಿತಿಯ ಮಹಾತ್ಮ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಮಾಡುವ ಯೋಜನೆಯಾಗಿದ್ದು, ಆದರೆ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಇದು ಜೆ.ಸಿ.ಬಿ ಯಂತ್ರಗಳಿಂದ ಅಕ್ರಮವಾಗಿ ಕಾಮಗಾರಿಗಳನ್ನು ನಡೆಸಿ ಕೂಲಿಕಾರ್ಮಿಕರಿಗೆ ಮೋಸ ಮಾಡಿರುತ್ತಾರೆ ಹಾಗೂ ನಾನು ತಮಗೆ ಮತ್ತು ಕೋಲಾರ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ವ್ಯಾಟ್ಸಾಫ್ ಮುಖಾಂತರ ಛಾಯಾ ಚಿತ್ರಗಳನ್ನು ಕಳುಹಿಸಿಕೊಟ್ಟಿರುತ್ತಾನೆ. ಆದರೆ ತಾಲ್ಲೂಕು ಪಂಚಾಯಿತಿಯಿಂದ ಬಂದಂತಹ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ತದನಂತರ ಅಧಿಕಾರಿಗಳು ಕಾಮಗಾರಿಗಳು ನೋಡಿ ಅವರು ಯಾವುದೇ ಅಕ್ರಮ ಮಾಡಿಲ್ಲ ಅಂತ ಅಧಿಕಾರಿಗಳು ಬರೆದುಕೊಂಡು ಹೋಗಿದ್ದಾರೆ. ಅ ಅಧಿಕಾರಿಗಳು ಪಿ.ಡಿ.ಓ ಜೊತೆ ಸೇರಿ ಶಾಮಿಲಾಗಿ ವರದಿಯನ್ನು ತಿರುಚಿರುತ್ತಾರೆ ಎಂದು ಆರೋಪಿಸಿದ್ದಾರೆ.
ನಾನು ಕಾಮಗಾರಿಗಳು ನಡೆಯುವ ಸ್ಥಳದ ಜಿ.ಪಿ.ಎಸ್ ಚಿತ್ರಗಳನ್ನು ಒಂಬುಡ್ಸ್‌ಮನ್ ಕಳುಹಿಸಿಕೊಟ್ಟಿರುತ್ತೇನೆ. ಆದರೆ ಬಂದಂತಹ ಅಧಿಕಾರಿಗಳು ಆಕ್ರಮವಾಗಿ ಕೆಲಸ ಮಾಡಿಸಿರುವ ಜೊತೆ ಸೇರಿ ಅಕ್ರಮವೆಸಗಿರುತ್ತಾರೆ ಮತ್ತು ಈ ಕಾಮಗಾರಿಗಳು ಆದರ ರಾಜಕಾಲುವೆಗಳ ಕಳೆದ ವರ್ಷ ಮಾಡಿರುವುದು ಸಹ ಪಿ.ಡಿ.ಓ ಅಕ್ರಮ ಹಣಕ್ಕಾಗಿ ಆಸೆಪಟ್ಟು ಈ ಕಾಮಗಾರಿಗಳನ್ನು ಮಾಡಿಸಿರುತ್ತಾರೆ.
ತಾವು ಈ ಕೂಡಲೇ ಈ ಅಕ್ರಮ ಕಾಮಗಾರಿಗಳನ್ನು ತಡೆ ಹಿಡಿಯದಿದ್ದರೆ ನಾವುಗಳು ಬೆಂಗಳೂರು ಆರ್.ಡಿ.ಪಿ.ಆರ್ ಕಮೀಷನರ್ ಮತ್ತು ಆರ್.ಡಿ.ಪಿ. ಆರ್ ಪ್ರಿನ್ಸಿಫಲ್ ಕಮೀಷನರ್‌ಗಳ ಜಿ.ಪಿ.ಎಸ್ ಪೋಟೋನ ಅರ್ಜಿಯನ್ನು ನಾವು ಕೊಡಲು ಮುಂದಾಗುತ್ತೇವೆ ನಾವು ತಮ್ಮ ದೂರವಾಣಿಗೆ ಆದರೆ ವ್ಯಾಟ್ಸಾಫ್ ಆಕ್ರಮ ಕೆಲಸ ಮಾಡಿರುವ ಜಿ.ಪಿ.ಎಸ್ ಛಾಯಾ ಚಿತ್ರಗಳು ನೀಡಿ ದಯವಿಟ್ಟು ಅಕ್ರಮವಾಗಿ ತೊಟ್ಟಿ ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಸ್ಥಗಿತಗೊಳಿಸಬೇಕು. ಹಾಗೂ ಯಾವುದೇ ಕಾರಣಕ್ಕೂ ಕೂಲಿ ಹಣ(ಎನ್.ಆರ್) ಹಣ ಪಾವತಿ ಮಾಡಬಾರದು ಎಂದು ಮನವಿ ಮಾಡಿದ್ದಾರೆ.