ನರೇಗಲ್ಲ ನಾರಾಯಣ ದೇವಸ್ಥಾನಕ್ಕೆ ತೇಜಸ್ವಿನಿ ಭೇಟಿ

ನರೇಗಲ್ಲ,ಜ.16: ನರೇಗಲ್ಲದಲ್ಲಿರುವ ಪುರಾತನ ದೇವಸ್ಥಾನಕ್ಕೆ ಬೆಂಗಳೂರಿನ ಅದಮ್ಯ ಫೌಂಡೇಷನ್‍ನ ತೇಜಸ್ವಿನಿ
ಅನಂತಕುಮಾರ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದುಕೊಂಡರು.
ಶ್ರೀ ಅನ್ನದಾನೇಶ್ವರ ಕಾಲೇಜಿನ ಕಾರ್ಯಕ್ರಮಕ್ಕೆ ಬಂದಿದ್ದ ಅವರು ನಂತರ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂದೆ ತಾವು ಚಿಕ್ಕವರಿದ್ದಾಗ ಈ ದೇವಸ್ಥಾನದಲ್ಲಿ ಆಡಿ ನಲಿದ ಸಂತಸದ ಕ್ಷಣಗಳನ್ನು ಹಂಚಿಕೊಂಡರು.
ನ್ಯಾಯವಾದಿ ರವೀಂದ್ರನಾಥ ದೊಡ್ಡಮೇಟಿ ದೇವಸ್ಥಾನದ ಬಗ್ಗೆ ವಿವರಣೆ ನೀಡಿದರು. ಜಕಣಾಚಾರಿ ಕಟ್ಟಡವು ಬಹಳಷ್ಟು ವಿಶಾಲವಾದ ಕ್ಷೇತ್ರದಲ್ಲಿ ಹರಡಿಕೊಂಡಿದೆ. ಕಾಲಾನುಕ್ರಮದಲ್ಲಿ ಇದು ಇಂತಹ ಸ್ಥಿತಿ ತಲುಪಿದೆ ಎಂದರು. ಡಾ. ಸಪ್ನಾ ಕಾಳೆ ತೇಜಸ್ವಿನಿಯವರನ್ನು ದೇವಸ್ಥಾನದ ಪರವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಿರಣ ಕಾಳೆ, ಅರ್ಚಕ ಕೃಷ್ಣ ಗ್ರಾಮಪುರೋಹಿತ, ರಘುನಾಥ ಕೊಂಡಿ, ದತ್ತ ಭಕ್ತ ಮಂಡಳಿ ಅಧ್ಯಕ್ಷ ಸಂಜೀವ ಕುಲಕರ್ಣಿ, ವೀಣಾ ಅಠವಲೆ, ಶಾರದಾಬಾಯಿ ಗ್ರಾಮಪುರೋಹಿತ, ಜ್ಯೋತಿ ನಾಡಿಗೇರ, ಸೀಮಾ ಕೊಂಡಿ, ವಿಮಲಾಬಾಯಿ ಗ್ರಾಮಪುರೋಹಿತ, ವನಜಾಕ್ಷಿ ಕುಲಕರ್ಣಿ, ಪ್ರಭಾ ಕುಲಕರ್ಣಿ ಇನ್ನೂ ಮುಂತಾದವರಿದ್ದರು.