ನರೇಂದ್ರ ಮೋದಿ ಹಟ್ಟು ಹಬ್ಬ : 70 ಸಸಿಗಳ ನೆಟ್ಟು ಸಪ್ತಾಹ ಆಚರಣೆ ಚಾಲನೆ

ಚಾಮರಾಜನಗರ, ಸೆ. 16- ಪ್ರಧಾನಿ ನರೇಂದ್ರ ಮೋದಿ ಅವರು 70 ನೇ ವರ್ಷದ ಹುಟ್ಟು ಹಬ್ಬವನ್ನು ಏಳು ದಿನಗಳ ಕಾಲ ವಿಶಿಷ್ಟ ರೀತಿಯಲ್ಲಿ ಅಚರಣೆ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಸೇವಾ ಸಪ್ತಾಹ ಸಮಿತಿ ಅಧ್ಯಕ್ಷ ಡಾ. ಎ.ಆರ್. ಬಾಬು ತಿಳಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ಪ್ರಧಾನಿ ನರೇಂದ್ರ ಮೋದಿ ಅವರ 70ನೇ ವರ್ಷದ ಜನ್ಮ ದಿನ ಅಂಗವಾಗಿ ಸೆ. 14 ರಿಂದ 20ವರೆಗೆ ನಡೆಯುವ ಸೇವಾ ಸಪ್ತಾಹ ಕಾರ್ಯಕ್ರಮಗಳಿಗೆ ಇಂದು ಸಸಿ ನೆಟ್ಟು ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ನೆಚ್ಚಿನ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಕೋವಿಡ್ ನಿಯಮಗಳನ್ನು ಪಾಲನೆ ಮಾಡುವ ಜೊತೆಗೆ ವಿವಿಧ ರೀತಿಯ ಸೇವಾ ಕಾರ್ಯಗಳನ್ನು ಕೈಗೊಂಡು ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಗಳನ್ನು ಮಾಡಲಾಗುತ್ತಿದೆ. ಸೆ. 17 ನರೇಂದ್ರ ಮೋದಿ ಅವರು ಜನ್ಮ ದಿನವಾಗಿದೆ. 7 ದಿನಗಳ ಕಾಲ ಸಸಿಗಳನ್ನು ನೆಟ್ಟು, ಪರಿಸರ ಸಂರಕ್ಷಣೆ ಮಾಡುವುದು, ಸಾರ್ವಜನಿಕ ಸ್ಥಳಗಳ ಸ್ವಚ್ಚತೆ, ಹಳ್ಳಿಗಳಲ್ಲಿ ನೈಮಲ್ರ್ಯತೆ ಬಗ್ಗೆ ಜಾಗೃತಿ, ಬಡವರಿಗೆ ಉಚಿತ ಕನ್ನಡಕಗಳ ವಿತರಣೆ, ಆಯಾ ಜಿಲ್ಲಾ ಹಾಗು ಮಂಡಲದ ವ್ಯಾಪ್ತಿಗಳಲ್ಲಿ ಬರುವ ಅಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಸೇರಿದಂತೆ ನಾನಾ ಸೇವಾ ಕಾರ್ಯಗಳನ್ನು ಕೈಗೊಳ್ಳಲು ಎಲ್ಲಾ ರೀತಿಯ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ ಎಂದರು.
ಈ ಕಾರ್ಯಕ್ರಮವು ಜಿಲ್ಲೆಯ ಎಲ್ಲಾ ಗ್ರಾಮಾಂತರ, ನಗರ ಘಟಕ, ಶಕ್ತಿ ಕೇಂದ್ರ, ಹಾಗೂ ಬೂತ್ ಮಟ್ಟಗಳಲ್ಲಿ ಕಾರ್ಯಕ್ರಮವನ್ನು ವಿಸ್ತರಣೆ ಮಾಡಲಾಗಿದೆ. ಬಿಜೆಪಿ ಎಲ್ಲಾ ಕಾರ್ಯಕರ್ತರು, ಪದಾಧಿಕಾರಿಗಳು ಮುಖಂಡರು ಸೇವಾ ಸಪ್ತಾಹ ಕಾರ್ಯಕ್ರಮಗಳ ಯಶಸ್ವಿಗೆ ಸಹಕಾರ ನೀಡಬೇಕು ಎಂದು ಡಾ|| ಬಾಬು ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಸುಂದರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ 70ನೇ ವರ್ಷದ ಹುಟ್ಟುಹಬ್ಬವನ್ನು ನಾವೆಲ್ಲರು ಸಂಭ್ರಮದಿಂದ ಆಚರಣೆ ಮಾಡಲು ಸೇವಾ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಬೇಕು. ತಮ್ಮ ವ್ಯಾಪ್ತಿಯಲ್ಲಿ ವಿವಿಧ ಸೇವಾ ಕಾರ್ಯಗಳನ್ನು ಕೈಗೊಳ್ಳಲು ಹಾಗೂ ಇತರರಿಗೂ ಸಹ ತಿಳಿಸಿ, ಬಿಜೆಪಿ ಹಾಗೂ ಪ್ರದಾನಿ ನರೇಂದ್ರ ಮೋದಿ ಅವರು ಸಾಧನೆಗಳ ಬಗ್ಗೆ ವಿವರಿಸಬೇಕು. ಕಳೆದ 6 ವರ್ಷಗಳ ಅವಧಿಯಲ್ಲಿ ದೇಶದ ಅಭಿವೃದ್ದಿಗಾಗಿ ಅವರು ಕೈಗೊಂಡ ಕಾರ್ಯಕ್ರಮಗಳು ಪ್ರತಿ ಮನೆಗೂ ತಲುಪಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಉಪಾಧ್ಯಕ್ಷರಾದ ಪಿ. ವೃಷಭೇಂದ್ರಪ್ಪ, ಮಂಗಳಮ್ಮ, ಜಿಲ್ಲಾ ವಕ್ತಾರ ಉಮ್ಮತ್ತೂರು ನಾಗೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ಜಯಶಂಕರ್, ಜಿಲ್ಲಾ ಕಾರ್ಯಧರ್ಶಿ ಪದ್ಮ, ಸಪ್ತಾಹದ ಮಂಡಲದ ಸಂಚಾಲಕ ಆನಂದ್ ಭಗೀರಥ, ನಗರ ಘಟಕದ ಅಧ್ಯಕ್ಷ ರಾಜು, ಕಾರ್ಯದರ್ಶಿ ರಾಮಸಮುದ್ರ ಶಿವು, ಮುಖಂಡರಾದ ಶಿವಮ್ಮ, ಶೈಲಜಾ ಮಲ್ಲೇಶ್, ಕಮಲಮ್ಮ, ದಾಕ್ಷಾಯಿಣಿ, ಮೊದಲಾದವರು ಇದ್ದರು.