ನರೇಂದ್ರ ಮೋದಿ ವೀಕ್ ಪಿಎಂ: ಬಿ.ಎನ್ ವಿನಾಯಕ

ಸಂಜೆವಾಣಿ ವಾರ್ತೆ

ದಾವಣಗೆರೆ.ಮಾ.೨೪; ಚೀನಾ ದೇಶ ನಮ್ಮ ದೇಶದೊಳಗೆ ನುಗ್ಗಿ ಒಂದು ಗ್ರಾಮವನ್ನೇ ಪ್ರಾರಂಭ ಮಾಡಿದ್ದರೂ ಸಹ ನಮ್ಮ ದೇಶದ ಪ್ರಧಾನಮಂತ್ರಿ ಕಣ್ಮುಚ್ಚಿ ಕುಳಿತಿದ್ದಾರೆ. ಪುಲ್ವಾಮ ದಾಳಿಯಿಂದ 42 ಸೈನಿಕರು ಸಾವಿಗೆ ತುತ್ತಾದರೂ ಇವತ್ತಿಗೂ ಸಾಕ್ಷಿ ಆಧಾರಗಳನ್ನು ದೇಶದ ಜನರಿಗೆ ಮಾಹಿತಿ ಕೊಟ್ಟಿಲ್ಲ. ಆದ್ದರಿಂದ ನಮ್ಮ ದೇಶದ ಪ್ರಧಾನಮಂತ್ರಿ ವೀಕ್ ಪಿಎಂ ಎಂದು ಕೆಪಿಸಿಸಿ ಎಸ್ಸಿ ವಿಭಾಗದ ಜಿಲ್ಲಾ ಮಾಧ್ಯಮ ವಕ್ತಾರ ಬಿ.ಎನ್ ವಿನಾಯಕ ಆರೋಪಿಸಿದ್ದಾರೆ.ಕೇಂದ್ರ ಬಿಜೆಪಿ ಸರ್ಕಾರ ನಡೆಸುವುದಕ್ಕೋಸ್ಕರ ಹಾಗೂ ಲೋಕಸಭಾ ಚುನಾವಣೆಗೋಸ್ಕರ ಎಸ್ ಬಿಐ ಬ್ಯಾಂಕ್ ನಲ್ಲಿರುವ ಚುನಾವಣೆಯ ಬಾಂಡುಗಳನ್ನು ಕದ್ದಂತ ವೀಕ್ ಪಿಎಂ ಎಂದು ದೂರಿದ್ದಾರೆ.ದೇಶದ ಪ್ರಧಾನಮಂತ್ರಿ ಒಂದು ವರ್ಷಕ್ಕೆ ಎರಡು ಕೋಟಿ ಉದ್ಯೋಗವನ್ನು ಯುವಕರಿಗೆ ಕೊಡುತ್ತೇವೆ ಎಂದು ಹೇಳಿ ನಮ್ಮ ದೇಶದ ಯುವಕರಿಗೆ ಮೋಸ ಮಾಡಿರುವುದರಲ್ಲಿ ತಿಳಿಯುತ್ತದೆ. ದೇಶದ ಪ್ರತಿಯೊಬ್ಬರ ಅಕೌಂಟಿಗೆ 15 ಲಕ್ಷ ಕೊಡುತ್ತೇವೆ ಅಂತ ಹೇಳಿ ಹಾಗೂ ಉಚಿತ ಗ್ಯಾಸ್ ಅಂತ ಹೇಳಿ, ಬೇಟಿ ಪಡಾವೋ ಬೇಟಿ ಬಜಾವೋ, ಡಿಜಿಟಲ್ ಇಂಡಿಯಾ. ಮೇಕ್ ಇನ್ ಇಂಡಿಯಾ, ಹೀಗೆ ಹಲವಾರು ಯೋಜನೆಗಳಲ್ಲಿ ದೇಶದ ಜನರಿಗೆ ಮೋಸ ಮಾಡಿ ಇವತ್ತು ದೇಶ ಜನರ ದೃಷ್ಟಿಯಲ್ಲಿ ವಿಕ್ ಪಿಎಂ ಆಗಿದ್ದಾರೆ ಎಂದಿದ್ದಾರೆ.ದೇಶದ ಪ್ರಧಾನಮಂತ್ರಿಯಾದ ನರೇಂದ್ರ ಮೋದಿಜೀ ಅವರು ಶ್ರೀಮಂತರಿಗೆ ಮತ್ತು ಅದಾನಿ, ಅಂಬಾನಿಯವರಿಗೆ ಸೌಲಭ್ಯಗಳನ್ನು ಕೊಡುವುದರಲ್ಲಿ ಸ್ಟ್ರಾಂಗ್ ಪಿಎಂ ಆಗಿದ್ದು, ದೇಶದ ದುರ್ಬಲ ಜನಾಂಗ ಮತ್ತು ಮಧ್ಯಮ ವರ್ಗ ಜನಾಂಗದವರಿಗೆ ಯಾವುದೇ ಸೌಲಭ್ಯ ಕೊಡದೆ ಇವರ ದೃಷ್ಟಿಯಲ್ಲಿ ವಿಕ್ ಪಿಎಂ ಆಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಮತ ಕೊಟ್ಟು ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಿದ ಹಾಗೆ ಲೋಕಸಭಾ ಚುನಾವಣೆಯಲ್ಲಿ ಕೂಡ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಅತಿಹೆಚ್ಚು ಮತ ನೀಡಿ ನಮ್ಮ ಪಕ್ಷವನ್ನು ಜನರು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಕರ್ನಾಟಕದಲ್ಲಿ ಮೋದಿ ನಾಯಕತ್ವದ ವಿರುದ್ಧ ಅರ್ಧ ಡಜನ್ ನಾಯಕರು ಬಂಡೆದ್ದಿದ್ದಾರೆ. ಟಿಕೆಟ್ ಪಡೆಯಲು ಅಸಮರ್ಥರಾದ ಬಿಜೆಪಿ ನಾಯಕರು ಆದಿ ಬೀದಿಯಲ್ಲಿ ಹೊಡೆದಾಡಿಕೊಳ್ಳುತ್ತಿದ್ದಾರೆ. ಪರಸ್ಪರ ಕೆಸರೆರಚಾಟ ನಡೆಸುತ್ತಿದ್ದಾರೆ. ಮೋದಿಯ ಯಾವ ಮನವಿಗೂ ಕಿವಿಕೊಟ್ಟಿಲ್ಲ. ಇವರಲ್ಲಿ ಕೆಲಸವು ನಮ್ಮ ಪಕ್ಷವನ್ನು ಸಂಪರ್ಕಿಸುತ್ತಿದ್ದಾರೆ. ಶಿಸ್ತಿನ ಪಕ್ಷದಲ್ಲಿ ಇದೆಂತ ಅಶಿಸ್ತಿನ ತಾಂಡವ. ಮೋದಿ ವೀಕ್ ಪಿಎಂ ಆಗಿರುವುದೇ ಇದಕ್ಕೆಲ್ಲ ಕಾರಣ ಎಂದು ಲೇವಡಿ ಮಾಡಿದ್ದಾರೆ.ಇಂತಹ ದುರ್ಬಲ ಪಿಎಂ ಅವರನ್ನು ದೇಶದ ಪ್ರಧಾನಮಂತ್ರಿಯಿಂದ ಇಳಿಸಿ, ಇವತ್ತು ನಮ್ಮ ದೇಶದ ಜನರನ್ನು ಮತ್ತು ನಮ್ಮ ದೇಶವನ್ನು ಉಳಿಸಬೇಕಾಗಿದೆ. ಆದ್ದರಿಂದ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಬುದ್ದಿ ಕಲಿಸಬೇಕಾಗಿದೆ ಹಾಗೂ ಬಿಜೆಪಿ ಪಕ್ಷಕ್ಕೆ ಮತದಾನವನ್ನು ಕೊಡದೆ, ಇವತ್ತು ಜನಪರವಾದ ಹಾಗೂ ಜನರ ಯೋಗ ಕ್ಷೇಮವನ್ನು ನೋಡುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ಕರೆ ನೀಡಿದ್ದಾರೆ