ನರೇಂದ್ರ ಮೋದಿ ವಿಶ್ವ ನಾಯಕ-ಸಾವಕಾರ

ಹುಬ್ಬಳ್ಳಿ,ಸೆ 25: ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಂಗವಾಗಿ ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ವಿಚಾರ ಸಂಕಿರಣ ಕಾರ್ಯಕ್ರಮ ವಾರ್ಡ ನಂ 47ರಲ್ಲಿ ನಡೆಯಿತು.
ಸೇವೆ ಮತ್ತು ಸಮರ್ಪಣೆ ಅಭಿಯಾನದಡಿಯಲ್ಲಿ ನರೇಂದ್ರ ಮೋದಿಯವರ ರಾಷ್ಟ್ರ ಸಮರ್ಪಿತ ಎರಡು ದಶಕದ ಜೀವನ ವಿಚಾರ ಗೋಷ್ಟಿ ಹು-ಧಾ ಸೆಂಟ್ರಲ್ ಕ್ಷೇತ್ರದ ವಿದ್ಯಾನಗರದಲ್ಲಿ ಹಮ್ಮಿಕೊಳ್ಳಲಾಯಿತು. ಬಿಜೆಪಿ ಮುಖಂಡ ಹಾಗೂ ಕೆಎಸಡಿಎಲ್ ನಿರ್ದೆಶಕರಾದ ಮಲ್ಲಿಕಾರ್ಜುನ ಸಾವಕಾರ ಮುಖ್ಯ ಭಾಷಣಕಾರರಾಗಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಕೇವಲ ನಮ್ಮ ದೇಶದನಾಯಕರಲ್ಲ ವಿಶ್ವ ನಾಯಕ ಎಂದರೆ ತಪ್ಪಾಗಲಾರದು ಭಾರತದ ಅಭಿವೃದ್ದಿಗೆ ನೆರೆಹೊರೆಯ ದೇಶಗಳ ಭಯೋತ್ಪಾದಕ ಸಂಘಟನೆಗಳು ತೊಂದರೆ ನೀಡುತ್ತಿದ್ದರು ಇಂತಹ ಭಯೋತ್ಪಾದಕ ಉಗ್ರ ಸಂಘಟನೆಗಳ ಕೃತ್ಯಗಳಿಗೆ ಪ್ರಧಾನಿ ಮೋದಿಜಿ ಬ್ರೇಕ್ ಹಾಕಿರುವುದರಿಂದ ನಾವೆಲ್ಲರೂ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ ಎಂದು ಹೇಳಿದರು.
ಗುಜರಾತಿನ ಮುಖ್ಯ ಮಂತ್ರಿಯಾಗಿದ್ದ ನರೇಂದ್ರ ಮೋದಿಯನ್ನು ಪ್ರಧಾನಿ ಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದಾಗ ವಿರೋಧ ವ್ಯಕ್ತಪಡಿಸಿದವರೆ ಹೆಚ್ಚು ಆದರೆ ಇಂದು ಅವರ ಸಾಧನೆ ವಿಶ್ವವೇ ಗಮನಿಸುತ್ತದೆ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರ ಹಿತದೃಷ್ಟಿಯಿಂದ ಆಯುಷ್ಮಾನ್ ಭಾರತ, ಜನ್ ಧನ್ ಮುದ್ರಾ ಕೌಶಲ್ಯಭಾರತ ಮೇಕ್ ಇನ್ ಇಂಡಿಯಾ ಗಳಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದು ಸಶಕ್ತ ಭಾರತ ನಿರ್ಮಾಣ ಮಾಡಿದ್ದಾರೆ. 81 ಕೋಟಿಗೂ ಅಧಿಕ ಕೋವಿಡ್ ಲಸಿಕೆಯನ್ನು ನೀಡಿ ಮಹಾಮಾರಿಯ ನಿರ್ವಹಣೆಯಲ್ಲಿ ಹಾಗೂ ಜಾಗತಿಕ ಜನಪ್ರಿಯ ನಾಯಕರ ಪಟ್ಟಿಯಲ್ಲಿ ನಮ್ಮ ಪ್ರಧಾನಿಗಳು ನಂಬರ 1. ಅಮೆರಿಕದ ಮಾಹಿತಿ ಗುಪ್ತಚರ ಕಂಪನಿ ‘ಮಾರ್ನಿಂಗ್ ಕನ್ಸಲ್ಟ್’ ಪ್ರತಿ ವರ್ಷ ಬಿಡುಗಡೆ ಮಾಡುವ ಜಾಗತಿಕ ನಾಯಕರ ಜನಪ್ರಿಯತೆಯ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಹು-ಧಾ ಸೆಂಟ್ರಲ್ ಮಹಿಳಾ ಮೋರ್ಚಾ ಅಧ್ಯಕ್ಷರು ಹಾಗೂ ಪಾಲಿಕೆ ಸದಸ್ಯರಾದ ರೂಪಾ ಶೆಟ್ಟಿ, ಸೆಂಟ್ರಲ್ ಪ್ರಧಾನ ಕಾರ್ಯದರ್ಶಿ ವೀರುಪಾಕ್ಷ ರಾಯನಗೌಡ್ರ, ರಾಮನಾಥ ಶೆಣೈ, ಪಕ್ಕಜ್ಜ ಕೋರಿ, ಹರೀಶ ಜಂಗಲಿ, ಮೃತ್ಯುಂಜಯ ಸ್ವಾಮಿ, ಸಹಾಯ ಸೀನಿಯರ ಸಿಟಿಜನ್ ಅಸೋಸಿಯೇಷನ್ ಅಧ್ಯಕ್ಷರಾದ ಮಲ್ಲಿಕಾರ್ಜುನ ನಾಯ್ಕರ, ವಿ. ಎಸ್. ಕವಜಗೇರಿ, ಮೈಲಾರಪ್ಪ ನಾಯ್ಕರ, ಬಿಜೆಪಿ ಮುಖಂಡರಾದ ಕೊಟ್ರೇಶ ಎಸ್.ಕೆ, ವಿಕಾಸ ದಲಬಂಜನ, ಸಮರ್ಥ ಶೆಟ್ಟಿ, ಅನೂಪ ನವಲಿ, ಮೇಘನಾ ಶಿಂಧೆ, ಸುಧೀರ ಇಂಗಳಗಿ, ಮಂಜುನಾಥ ಜಾಧವ, ಚೇತನ ಜಾಧವ, ರಾಹುಲ ಶಿಂಧೆ, ಡೇವಿಡ್, ಸೈಫ ಮುಲ್ಲಾ, ಸಿದ್ಧರಾಮಗೌಡ ಪಾಟೀಲ ಮುಂತಾದವರು ಭಾಗವಹಿಸಿದರು.